ನವದೆಹಲಿ: ಸ್ನೇಹಿತರ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಕೈಗಾರಿಕೋದ್ಯಮದ ಜೊತೆ ಕೈ ಜೋಡಿಸಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಮೋದಿಗೆ ಸ್ನೇಹಿತರ ದಿನಾಚರಣೆಯ ದಿನದಂದು ಕಾಲೆಳೆದಿದ್ದಾರೆ.
ಈ ವೀಡಿಯೋದಲ್ಲಿ ಮೋದಿ ಹಲವಾರು ಕೈಗಾರಿಕೋದ್ಯಮದ ಗಣ್ಯ ವ್ಯಕ್ತಿಗಳಿಗೆ ಶೇಕ್ ಹ್ಯಾಂಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವೀಡಿಯೋವನ್ನು ರಾಹುಲ್ ಗಾಂಧಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಮ್ ದೋ ಹಾಮಾರೆ ದೋ ಕಿ ಸರ್ಕಾರ್‌ಗೆ ಸ್ನೇಹಿತರ ದಿನಾಚರಣೆ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಶುಭಾಶಯ ಕೋರಿದ್ದಾರೆ.
ಮೋದಿಯವರ ಹಳೆಯ ಫೋಟೋಗಳನ್ನು ಬಳಸಿ, ಹಮ್ ದೋ ಹಾಮಾರೆ ದೋ ಕಿ (ನಾವಿಬ್ಬರು, ನಮಗಿಬ್ಬರು) ಎನ್ನುತ್ತಾ, ಕೇವಲ ನಾಲ್ಕು ಜನರಿಂದ ದೇಶವನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
View this post on Instagram
ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶದ ವೇಳೆ ಕೂಡ ಹಮ್ ದೋ, ಹಮಾರೆ ದೋ ಎಂಬ ಪದ ಬಳಸಿದ್ದರು ಮತ್ತು ನೂತನ ಕೃಷಿ ಕಾಯ್ದೆ ವಿರುದ್ಧ ಹರಿಹಾಯ್ದಿದ್ದರು. ಈಗ ಮತ್ತೆ ನಾಲ್ಕು ಜನರು ಮಾತ್ರ ದೇಶವನ್ನು ನಡೆಸುತ್ತಿದ್ದಾರೆ ಹಾಗೂ ಅವರು ಯಾರೆಂದು ಎಲ್ಲರಿಗೂ ತಿಳಿದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ:ಬಿಜೆಪಿಯಲ್ಲಿ ಅಸಮಾಧಾನ ಪ್ರಶ್ನೆಯೇ ಇಲ್ಲ: ಈಶ್ವರಪ್ಪ