-ತನಿಖೆಗೆ ಮೂರು ತಂಡ ರಚಿಸಿದ ಅರಣ್ಯ ಇಲಾಖೆ
ಭುವನೇಶ್ವರ: ಓಡಿಶಾ ರಾಜ್ಯದ ಮಕಾನಗಿರಿ ವ್ಯಾಪ್ತಿಯ ಪೋಡಿಯಾ ಬ್ಲಾಕ್‍ನಲ್ಲಿರುವ ಗ್ರಾಮದ ಜನರು ಮೊಸಳೆ ಕೊಂಡು ಅಡುಗೆ ಮಾಡಿಕೊಂಡು ತಿಂದಿದ್ದಾರೆ.
ಸಾಮಾನ್ಯವಾಗಿ ಮೊಸಳೆಯನ್ನು ಕಂಡ್ರ ಜನ ಭಯಬೀಳುತ್ತಾರೆ. ಆದ್ರೆ ಪೋಡಿಯಾ ಬ್ಲಾಕ್ ನಲ್ಲಿರುವ ಕಳಾದಪಲ್ಲಿ ಗ್ರಾಮದ ಕೆಲವರು ಉಪಾಯದಿಂದ ಮೊಸಳೆಯನ್ನ ಹಿಡಿದು ಗ್ರಾಮಕ್ಕೆ ತಂದಿದ್ದಾರೆ. ಮೊಸಳೆ ಗ್ರಾಮಕ್ಕೆ ತರುತ್ತಿದ್ದಂತೆ ಸುದ್ದಿ ಪಕ್ಕದ ಊರುಗಳಿಗೂ ಹಬ್ಬಿದೆ. ಈ ವಿಷಯ ಅರಣ್ಯಾಧಿಕಾರಿಗಳ ಗಮನಕ್ಕೂ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ.
Advertisement
Odisha: A crocodile has allegedly been killed and eaten by some people at Kaladapalli village under Podia block in Malkangiri. District Forest Officer Pradeep Mirase says, "Three teams have been formed to investigate the matter." pic.twitter.com/ino60KkW1h
— ANI (@ANI) July 2, 2020
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಅರಣ್ಯಾಧಿಕಾರಿ ಪ್ರದೀಪ್ ಮೀರಾಸೆ, ಕಳಾದಪಲ್ಲಿಯ ಕೆಲವರು ಮೊಸಳೆ ಹಿಡಿದು ಕೊಂದಿದ್ದಾರೆ. ನಂತರ ಅದರ ಮಾಂಸವನ್ನು ಬೇಯಿಸಿಕೊಂಡು ತಿಂದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನ ರಚಿಸಲಾಗಿದ್ದು, ಶಂಕೆಯ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.