– ಸ್ಮಾರ್ಟ್‍ಫೋನ್ ಗಾಗಿ ನಡೆದ ಕೊಲೆ
– ಪ್ರೇಯಸಿಗಾಗಿ ಗೆಳೆಯನನ್ನೇ ಕೊಂದ
ಲಕ್ನೋ: ಗೆಳತಿಗೆ ಸ್ಮಾರ್ಟ್‍ಫೋನ್ ನೀಡುವದಕ್ಕಾಗಿ ಗೆಳೆಯನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಸೈಂಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜನವರಿ 6ರಂದು ಸೈಂಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೃತ ದೇಹ ಜೀತೇಂದ್ರ ಕುಮಾರ್ ಎಂಬುವುದ ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂರೇ ದಿನಗಳಲ್ಲಿ ಮೃತನ ಗೆಳೆಯ ಮೋನು ಮತ್ತು ಮತ್ತೋರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗೆಳತಿಗಾಗಿ ಗೆಳೆಯನನ್ನ ಕೊಂದ: ಮೋನು ಕೆಲಸವಿಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದನು. ಇಂತಹ ಸಮಯದಲ್ಲಿಯೇ ಮೋನು ಪ್ರೇಯಸಿ ರತ್ನಮಂಜರಿ (ಹೆಸರು ಬದಲಾಯಿಸಲಾಗಿದೆ) ಚೆನ್ನಾಗಿರುವ ಸ್ಮಾರ್ಟ್ ಫೋನ್ ಕೊಡಿಸುವಂತೆ ಹಠ ಹಿಡಿದಿದ್ದಳು. ಜೀತೇಂದ್ರ ಬಳಿಯಲ್ಲಿರುವ ಮೊಬೈಲ್ ಮೇಲೆ ಮೋನು ಕಣ್ಣು ಬಿದ್ದಿತ್ತು.
ಮೋನು ತನ್ನ ಗೆಳೆಯನ ಜೊತೆ ಸೇರಿ ಜೀತೇಂದ್ರನನ್ನ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದನು. ಈ ವೇಳೆ ಜೀತೇಂದ್ರನ ಶರ್ಟ್ ನಿಂದಲೇ ಆತನ ಕತ್ತು ಹಿಸುಕಿದ್ದಾರೆ. ನಂತರ ಜೀತೇಂದ್ರ ಬಾಯಿ ಮತ್ತು ಕಿವಿಗೆ ಮಣ್ಣು ತುಂಬಿದ್ದಾರೆ. ಜೀತೇಂದ್ರ ಸತ್ತಿರೋದು ಖಚಿತವಾಗ್ತಿದ್ದಂತೆ ಮೊಬೈಲ್ ತೊಗೊಂಡು ಸ್ಥಳದಿಂದ ಇಬ್ಬರು ಎಸ್ಕೇಪ್ ಆಗಿದ್ದರು. ಇದೀಗ ಇಬ್ರು ಜೈಲು ಸೇರಿದ್ದಾರೆ.