ಮೊಬೈಲ್ ಅಡಗಿಸಿಟ್ಟರೆಂದು ತಂದೆಯನ್ನ ಬರ್ಬರವಾಗಿ ಕೊಲೆಗೈದ ಮಗಳು

Public TV
1 Min Read
GIRL MOBILE

– ತಾಯಿ ಜೊತೆ ಸೇರಿ ಅಂತ್ಯಸಂಸ್ಕಾರ

ರಾಯ್ಪುರ: ಮೊಬೈಲ್ ಅಡಗಿಸಿಟ್ಟಿದ್ದಕ್ಕೆ ರೊಚ್ಚಿಗೆದ್ದ ಮಗಳು ತನ್ನ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆಯೊಂದು ಛತ್ತೀಸ್ ಗಡದ ಬಿಲಾಸ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಮಗಳನ್ನು ದಿವ್ಯ ಸರಸ್ವತಿ(28) ಎಂದು ಗುರುತಿಸಲಾಗಿದ್ದು, ಈಕೆ 58 ವರ್ಷದ ತಂದೆಯನ್ನು ಕೊಲೆ ಮಾಡಿದ್ದಾಳೆ. ಬಳಿಕ ತಾಯಿ ಸಹಾಯದಿಂದ ಮನೆ ಸಮೀಪವೇ ಅಂತ್ಯಕ್ರಿಯೆ ನಡೆಸಿದ್ದಾಳೆ. ಈ ಘಟನೆ ಜನವರಿ 24ರಂದು ಸಂಜೆ ಕಾಂಚನ್ ಪುರ ಗ್ರಾಮದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇದೀಗ ಪೊಲೀಸರು ತಾಯಿ ಹಾಗೂ ಮಗಳನ್ನು ಬಂಧಿಸಿದ್ದಾರೆ.

Police Jeep 1 2 medium

ಜನವರಿ 23ರಂದು ದಿವ್ಯ ಪತಿ ಆಕೆಯನ್ನು ತವರು ಮನೆಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾನೆ. ಹೀಗೆ ಬಂದಿದ್ದ ದಿವ್ಯಳ ಮೊಬೈಲ್ ಎಲ್ಲೋ ಮನೆಯಲ್ಲಿ ಕಳೆದುಹೋಗಿತ್ತು. ಈ ವೇಳೆ ಆಕೆ ಈ ಬಗ್ಗೆ ತನ್ನ ತಂದೆಯ ಬಳಿ ಹೇಳಿಕೊಂಡಿದ್ದಾಳೆ. ಆಗ ಮಂಗ್ಳು ರಾಮ್ ಧನುಹಾರ್ ಮೊದಲು ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಬಳಿಕ ನನ್ನ ಇಚ್ಛೆಯ ವಿರುದ್ಧ ಮದುವೆಯಾಗಿದ್ದೀಯಾ, ಹೀಗಾಗಿ ನಾನು ಅದನ್ನು ಅಡಗಿಸಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಮಗಳಿಗೆ ಫೋನ್ ಕೊಡಲು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದಿವ್ಯ, ಕೋಲಿನಿಂದ ತಂದೆಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ. ತಲೆಗೆ ಕಲ್ಲಿನಿಂದ ಹೊಡೆದಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಂಗ್ಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

girl phone

ತಂದೆ ಸಾವನ್ನಪ್ಪಿದ ಬಳಿಕ ಮಗಳ ಜೊತೆ ತಾಯಿ ಸೇರಿಕೊಂಡು ಮಂಗ್ಳುವಿನ ಮೃತದೇಹವನ್ನು ಮನೆಯ ಪಕ್ಕದಲ್ಲಿಯೇ ಹೂತಿದ್ದಾರೆ. ಅಲ್ಲದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇತ್ತ ಘಟನೆಯ ಸಂಪೂರ್ಣ ದೃಶ್ಯವನ್ನು ನೋಡಿದ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸೀಲನೆ ನಡೆಸಿ ತಾಯಿ ಹಾಗೂ ಮಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Police Jeep

Share This Article
Leave a Comment

Leave a Reply

Your email address will not be published. Required fields are marked *