– 2 ಮೇಡಿನ್, 3 ವಿಕೆಟ್ ಸಿರಾಜ್ ದಾಖಲೆಯ ಬೌಲಿಂಗ್ ಮೋಡಿ
– ಒಂದೇ ಪಂದ್ಯದಲ್ಲಿ ಆರ್‌ಸಿಬಿಯಿಂದ ದಾಖಲೆಗಳ ಮೇಲೆ ದಾಖಲೆ
ಅಬುಧಾಬಿ: ಇಂದು ನಡೆದ ಐಪಿಎಲ್-2020ಯ 39ನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬೆಂಗಳೂರು ತಂಡಕ್ಕೆ 85 ರನ್‍ಗಳ ಸಾಧಾರಣ ಗುರಿ ನೀಡಿದೆ.
ಆರ್‌ಸಿಬಿ ಬೌಲರ್‌ಗಳ ದಾಖಲೆ: ಇಂದಿನ ಪಂದ್ಯದಲ್ಲಿ ಅದ್ಭುತವಾಗಿ ಬೌಲ್ ಮಾಡಿದ ವೇಗಿ ಮೊಹಮ್ಮದ್ ಸಿರಾಜ್ ಅವರು ಎರಡು ಓವರ್ ಬೌಲ್ ಮಾಡಿ ಒಂದು ರನ್ ನೀಡದೇ ಮೇಡಿನ್ ಮಾಡಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ಐಪಿಎಲ್‍ನ ಒಂದೇ ಪಂದ್ಯದಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇವರ ಜೊತೆಗೆ ಐದನೇ ಓವರ್ ಅನ್ನು ಕೂಡ ಕ್ರಿಸ್ ಮೋರಿಸ್ ಮೇಡನ್ ಮಾಡಿದರು. ನಂತರ 12ನೇ ಓವರ್ ಅನ್ನು ವಾಷಿಂಗ್ಟನ್ ಸುಂದರ್ ಅವರು ಮೇಡನ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಮೇಡಿನ್ ಓವರ್ ಮಾಡಿದ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ಪಾತ್ರವಾಗಿದೆ.
Advertisement
The many moods of #RCB Skipper, @imVkohli #Dream11IPL pic.twitter.com/dNyQXkpd8U
— IndianPremierLeague (@IPL) October 21, 2020
Advertisement
ಭರ್ಜರಿ ಬೌಲಿಂಗ್
ಇಂದಿನ ಪಂದ್ಯದಲ್ಲಿ ಆರ್‍ಸಿಬಿ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಇಂದು ಸೂಪರ್ ಆಗಿ ಬೌಲ್ ಮಾಡಿದ ಮೊಹಮ್ಮದ್ ಸಿರಾಜ್ ಅವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದು ಕೇವಲ ಎಂಟು ರನ್ ನೀಡಿದರು. ಜೊತೆಗೆ ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಯುಜ್ವೇಂದ್ರ ಚಹಲ್ ಅವರು ಎರಡು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದು ಮಿಂಚಿದರು.
Advertisement
WATCH – Virat gets DRS bang on.
Given not out, but Virat goes for the DRS in the nick of time. LBW Dinesh Karthik – brilliant call from @imVkohli.https://t.co/nnwRsxqW0Q #Dream11IPL
— IndianPremierLeague (@IPL) October 21, 2020
Advertisement
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ತಂಡದ ನಾಯಕ ಇಯೊನ್ ಮೋರ್ಗಾನ್ ಅವರು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಅಂತಯೇ ಓಪನರ್ ಆಗಿ ಶುಭ್‍ಮನ್ ಗಿಲ್ ಮತ್ತು ರಾಹುಲ್ ತ್ರಿಪಾಠಿ ಕಣಕ್ಕಿಳಿದರು. ಆದರೆ ಎರಡನೇ ಓವರ್ ಮಾಡಲು ಬಂದ ಆರ್‌ಸಿಬಿ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮೊದಲು ತ್ರಿಪಾಠಿಯವರನ್ನು 2ನೇ ಓವರ್ ಮೂರನೇ ಬಾಲಿನಲ್ಲಿ ಔಟ್ ಮಾಡಿದರು. ನಂತರ ನಾಲ್ಕನೇ ಬಾಲಿನಲ್ಲಿ ನಿತೀಶ್ ರಾಣಾ ಅವರನ್ನು ಬೌಲ್ಡ್ ಮಾಡಿ ಕೋಲ್ಕತ್ತಾಗೆ ಆರಂಭಿಕ ಆಘಾತ ನೀಡಿದರು.
At the halfway mark, #KKR are 36/5
Live – https://t.co/XUEBCQIfuL #Dream11IPL pic.twitter.com/5Iuws4Hycr
— IndianPremierLeague (@IPL) October 21, 2020
ನಂತರ ಮೂರನೇ ಓವರ್ ಬೌಲಿಂಗ್‍ಗೆ ಬಂದ ನವದೀಪ್ ಸೈನಿ ಮ್ಯಾಜಿಕ್ ಮಾಡಿದರು. ಆರಂಭಿಕನಾಗಿ ಬಂದು ಆಡುತ್ತಿದ್ದ ಶುಭ್‍ಮನ್ ಗಿಲ್ ಅವರನ್ನು ಸೈನಿಯವರು ಔಟ್ ಮಾಡಿ ಪೆವಿಲಿಯನ್ ಸೇರಿಸಿದರು. ನಂತರ ನಾಲ್ಕನೇ ಓವರ್ ಬೌಲಿಂಗ್‍ಗೆ ಬಂದ ಸಿರಾಜ್ ಮತ್ತೆ ಟಾಮ್ ಬಾಂಟನ್ ಅವರನ್ನು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು. ಈ ಮೂಲಕ ನಾಲ್ಕು ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ನಾಲ್ಕು ವಿಕೆಟ್ ಕಳೆದುಕೊಂಡು ಕೇವಲ 14 ರನ್ ಪೇರಿಸಿತು.
WATCH – Siraj picks 2 in 2
First Tripathi, next ball Rana – Siraj was on a roll as he picked two wickets in two balls to wreck KKR early. Splendid bowling from Siraj.https://t.co/gf6m8Ijczn #Dream11IPL
— IndianPremierLeague (@IPL) October 21, 2020
ನಂತರ ನಾಯಕ ಇಯೊನ್ ಮೋರ್ಗಾನ್ ಮತ್ತು ದಿನೇಶ್ ಕಾರ್ತಿಕ್ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ 8ನೇ ಓವರ್ ನಾಲ್ಕನೇ ಬಾಲಿನಲ್ಲಿ ಜಾದು ಮಾಡಿದ ಯುಜ್ವೇಂದ್ರ ಚಹಲ್ ಅವರು, 14 ಬಾಲಿಗೆ 4 ರನ್ ಸಿಡಿಸಿ ಆಡುತ್ತಿದ್ದ ಕಾರ್ತಿಕ್ ಅವರನ್ನು ಔಟ್ ಮಾಡಿದರು. 12ನೇ ಓವರ್ ಮೂರನೇ ಬಾಲಿನಲ್ಲಿ ಚಹಲ್ ಮತ್ತೆ ಮ್ಯಾಜಿಕ್ ಮಾಡಿದರು. 17 ಬಾಲಿಗೆ 4 ರನ್ ಗಳಿಸಿದ್ದ ಪ್ಯಾಟ್ ಕಮ್ಮಿನ್ಸ್ ಅವರನ್ನು ಔಟ್ ಮಾಡಿದರು. ಈ ಮೂಲಕ ಕೋಲ್ಕತ್ತಾ 13ನೇ ಓವರ್ ಮುಕ್ತಾಯಕ್ಕೆ ಕೇವಲ 46 ರನ್‍ಗಳಿಸಿ ಆರು ವಿಕೆಟ್ ಕಳೆದುಕೊಂಡಿತ್ತು.
A dream start here for the #RCB.
At the end of the powerplay #KKR are 17/4.#Dream11IPL pic.twitter.com/baKSWwy7tu
— IndianPremierLeague (@IPL) October 21, 2020
ಕ್ರೀಸಿಗೆ ಬಂದ ಸಮಯದಿಂದಲೂ ತಾಳ್ಮೆಯಿಂದ ಆಡುತ್ತಿದ್ದ ನಾಯಕ ಇಯೊನ್ ಮೋರ್ಗಾನ್ ಅವರು 34 ಬಾಲಿಗೆ 30 ರನ್‍ಗಳಿ 15ನೇ ಓವರಿನ ನಾಲ್ಕನೇ ಬಾಲಿನಲ್ಲಿ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಜೊತೆಯಾದ ಲಾಕಿ ಫರ್ಗುಸನ್ ಮತ್ತು ಕುಲದೀಪ್ ಯಾದವ್ ಅವರು 25 ಬಾಲಿಗೆ 26 ರನ್‍ಗಳ ಜೊತೆಯಾಟವಾಡಿದರು. ಆದರೆ ಕೊನೆಯ ಬಾಲಿನಲ್ಲಿ ಯಾದವ್ ಅವರು ರನೌಟ್ ಆದರು.