ಬೆಂಗಳೂರು: ಜನವರಿಗೆ 16 ರಿಂದ ಕೊರೊನಾ ಲಸಿಕೆ ವಿತರಣೆ ಆರಂಭವಾಗಲಿದ್ದು ಕರ್ನಾಟಕದಲ್ಲಿ ಒಟ್ಟು 3.85 ಲಕ್ಷ ಲಸಿಕೆ ವಿತರಣೆ ನಡೆಯಲಿದೆ.
ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ಬಾಗಲಕೋಟೆ, ಮೈಸೂರು ಕಲಬುರಗಿಯಲ್ಲಿ ಲಸಿಕೆಯ ಕೇಂದ್ರಗಳು ಇರಲಿದ್ದು ಇಲ್ಲಿಂದ ಜಿಲ್ಲೆಗಳಿಗೆ ರವಾನೆಯಾಗಲಿದೆ. ಮೊದಲನೇ ಡೋಸ್ ಜಿಲ್ಲಾವಾರು ಹಂಚಿಕೆ ಮಾಹಿತಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.
Advertisement
Advertisement
ಎಲ್ಲಿಂದ ಎಲ್ಲಿಗೆ?
ಎಸ್‌ವಿಎಸ್ ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬಿಬಿಎಂಪಿ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು
Advertisement
ಎಸ್‌ವಿಎಸ್ ಬೆಳಗಾವಿ : ಬೆಳಗಾವಿ, ಧಾರವಾಡ, ಹಾವೇರಿ, ಉತ್ತರಕನ್ನಡ
Advertisement
ಆರ್‌ವಿಎಸ್ ಚಿತ್ರದುರ್ಗ: ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ
ಆರ್‌ವಿಎಸ್ ಬಾಗಲಕೋಟೆ : ಬಾಗಲಕೋಟೆ, ವಿಜಯಪುರ, ಗದಗ್, ಕೊಪ್ಪಳ
ಆರ್‌ವಿಎಸ್ ಮೈಸೂರು: ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು
ಮಂಗಳೂರು: ಚಿಕ್ಕಮಗಳೂರು, ಮಂಗಳೂರು, ಉಡುಪಿ
ಆರ್‌ವಿಎಸ್ ಕಲಬುರಗಿ: ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ