– ದೇವಾಲಯದಲ್ಲಿ ಮದ್ವೆಯಾಗಿದ್ದ ಜೋಡಿ
ಲಕ್ನೋ: ವರನಿಗೆ ರಾಡ್‍ನಿಂದ ಹಲ್ಲೆ ನಡೆಸಿ ನಗದು ಹಾಗೂ ಆಭರಣವನ್ನು ದೋಚಿಕೊಂಡು ವಧು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಧು ಹರಿದ್ವಾರ ನಿವಾಸಿಯಾಗಿದ್ದು, ವರ ಬಿಜ್ನೋರ್ ಕುಂದಾ ಖುರ್ದ್ ಗ್ರಾಮದವನಾಗಿದ್ದಾನೆ. ಮಾರ್ಚ್ 15ರಂದು ಇಬ್ಬರು ದೇವಾಲಯವೊಂದರಲ್ಲಿ ವಿವಾಹವಾದರು. ಮದುವೆ ಬಳಿಕ ವಧುವನ್ನು ಮನೆಗೆ ಕರೆದೊಯ್ದ ವರ ಇನ್ನು ಮುಂದೆ ಲೈಫ್‍ನಲ್ಲಿ ಸೆಟೆಲ್ಡ್ ಆದೇ ಎಂದು ಭಾವಿಸಿಸಿದ್ದನು. ಆದರೆ ಮದುವೆಯಾದ ಮೊದಲ ರಾತ್ರಿಯೇ ಆತನ ಕನಸುಗಳು ನುಚ್ಚುನೂರಾಗಿದೆ. ಮೊದಲ ರಾತ್ರಿಯೇ ವಧು ಕಬ್ಬಿಣದ ರಾಡ್‍ನಿಂದ ವರನ ಮೇಲೆ ಹಲ್ಲೆ ನಡೆಸಿ ಆತನನ್ನು ಗಂಭೀರವಾಗಿ ಗಾಯಗೊಳಿಸಿದ್ದಾಳೆ.
ಘಟನೆ ಕುರಿತಂತೆ ಪ್ರತಿಕ್ರಿಯಿಸಿ ವರ, ಕಳ್ಳತನ ಮಾಡಲೆಂದು ವಧು ಮೊದಲೇ ಯೋಜಿಸಿಕೊಂಡು ಮದುವೆಯಾಗಿದ್ದಾಳೆ ಎಂದು ಹೇಳಿದ್ದಾನೆ. ನಿಜವಾಗಲೂ ಏನಾಯಿತು ಎಂದು ತಿಳಿಯುತ್ತಿಲ್ಲ. ಇದ್ದಕ್ಕಿದ್ದಂತೆ ನನ್ನ ಪತ್ನಿ ರಾಡ್‍ನಿಂದ ಹೊಡೆಯಲು ಆರಂಭಿಸಿದಳು. ಇದರಿಂದ ನಾನು ಪ್ರಜ್ಞೆ ತಪ್ಪಿ ಬಿದ್ದೆ. ನಂತರ ಆಕೆ 20,000 ರೂ ನಗದು ಹಾಗೂ 2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾಳೆ ಎಂಬ ವಿಚಾರ ತಿಳಿದುಬಂದಿದೆ ಎಂದು ಹೇಳಿದನು.
ಸದ್ಯ ಘಟನೆ ಕುರಿತಂತೆ ವರನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.