– ಒಟ್ಟು ಸೋಂಕಿತರ ಸಂಖ್ಯೆ 3,09,793ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸ್ಫೋಟವಾಗಿದ್ದು, ಪ್ರಪ್ರಥಮ ಬಾರಿಗೆ ಕೇವಲ 24 ಗಂಟೆಗಳಲ್ಲಿ 9,386 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,09,793ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 84,987ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಇಂದು 141 ಜನ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 5,232ಕ್ಕೆ ಏರಿಕೆಯಾಗಿದೆ. 747 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7,866 ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈ ವರೆಗೆ ಒಟ್ಟು 2,19,554 ಜನ ಬಿಡುಗಡೆಯಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.70.87ರಷ್ಟಿದೆ. ಇಂದು 68,187 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವರೆಗೆ ಒಟ್ಟು 26,48,808 ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ.
ರಾಜ್ಯದಲ್ಲಿ 141 ಜನರ ಪೈಕಿ ಬೆಂಗಳೂರಿನಲ್ಲೇ 59 ಜನ ಕೊರೊನಾಗೆ ಬಲಿಯಾಗಿದ್ದಾರೆ. ಸಿಲಿಕಾನ್‍ಸಿಟಿಯಲ್ಲಿ ಇಂದು 3,357 ಪ್ರಕರಣಗಳು ಪತ್ತೆಯಾಗಿದ್ದು, 35,989 ಸಕ್ರಿಯ ಪ್ರಕರಣಗಳಿವೆ. 3,362 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ, ಬಾಗಲಕೋಟೆ 121, ಬಳ್ಳಾರಿ 550, ಬೆಳಗಾವಿ 318, ಬೆಂಗಳೂರು ಗ್ರಾಮಾಂತರ 59, ಬೆಂಗಳೂರು ನಗರ 3,357, ಬೀದರ್ 76, ಚಾಮರಾಜನಗರ 36, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 229, ಚಿತ್ರದುರ್ಗ 61, ದಕ್ಷಿಣ ಕನ್ನಡ 297, ದಾವಣಗೆರೆ 391, ಧಾರವಾಡ 234, ಗದಗ 110, ಹಾಸನ 334, ಹಾವೇರಿ 117, ಕಲಬುರಗಿ 232, ಕೊಡಗು 25, ಕೋಲಾರ 108, ಕೊಪ್ಪಳ 155, ಮಂಡ್ಯ 197, ಮೈಸೂರು 895, ರಾಯಚೂರು 239, ರಾಮನಗರ 105, ಶಿವಮೊಗ್ಗ 306, ತುಮಕೂರು 127, ಉಡುಪಿ 209, ಉತ್ತರ ಕನ್ನಡ 164, ವಿಜಯಪುರ 121 ಮತ್ತು ಯಾದಗಿರಿಯಲ್ಲಿ 112 ಮಂದಿಗೆ ಸೋಂಕು ತಗುಲಿದೆ.