– ಕ್ವಾರ್ಟರ್ ಫೈನಲ್ ನಲ್ಲಿ ಆಸ್ಟ್ರೇಲಿಯಾಗೆ ಸೋಲು
ಟೋಕಿಯೋ: ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ರಚಿಸಿದ್ದು, ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ನಲ್ಲಿ ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಭಾರತ 1-0 ಅಂತರದಲ್ಲಿ ಸೋಲಿಸಿತು.
ಭಾರತದ ಗುರ್‍ಜಿತ್ ಕೌರ್ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಪಡೆದು ಗೋಲ್ ದಾಖಲಿಸಿದರು. ಆಗಸ್ಟ್ 4ರಂದು ಅರ್ಜೆಂಟಿನಾ ವಿರುದ್ಧ ಭಾರತ ಸೆಮಿಫೈನಲ್ ಆಡಲಿದೆ. ಅರ್ಜೆಂಟಿನಾ ಕ್ವಾರ್ಟರ್ ಫೈನಲ್ ನಲ್ಲಿ ಜರ್ಮನಿ ತಂಡವನ್ನು 3-0 ಅಂತರದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಇದನ್ನೂ ಓದಿ: ಸಿಂಧುಗೆ ಜಯ – ಭಾರತಕ್ಕೆ ಕಂಚಿನ ಸಿಂಧೂರ
ಹಾಕಿಯಲ್ಲಿ ಭಾರತ ಮುನ್ನುಗ್ಗುತ್ತಿದ್ದು, ಎರಡು ದಿನಗಳಲ್ಲಿ ಎರಡು ಗೆಲುವು ಸಿಕ್ಕಿದೆ. ಭಾನುವಾರ ಪುರುಷರ ಹಾಕಿ ಟೀಂ 41 ವರ್ಷದ ಬಳಿಕ ಒಲಿಂಪಿಕ್ ನಲ್ಲಿ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ. ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 3-1 ಅಂತರದಲ್ಲಿ ಕಟ್ಟಿ ಹಾಕಿ ಸೆಮಿಫೈನಲ್ ತನ್ನ ಸ್ಥಾನ ಕಾಯ್ದಿರಿಸಿಕೊಂಡಿತು. ಇದನ್ನೂ ಓದಿ: ಹಾಕಿಯಲ್ಲಿ ಭಾರತದ ಸಾಧನೆ – 41 ವರ್ಷದ ಬಳಿಕ ಸೆಮಿ ಪ್ರವೇಶ