ಮೊದಲ ದಿನವೇ ಕಣ್ಣೀರಿಟ್ಟ ಮೊಗ್ಗಿನ ಚೆಲುವೆ ಶುಭಾ

Public TV
1 Min Read
Shubha Poonja Cry

ಬೆಂಗಳೂರು: ಬಿಗ್‍ಬಾಸ್ ಶೋ ಆರಂಭವಾದ ಮೊದಲ ದಿನವೇ ಸ್ಪರ್ಧಿ, ಮೊಗ್ಗಿನ ಮನಸ್ಸಿನ ಚೆಲುವೆ ಶುಭಾ ಪೂಂಜಾ ಕಣ್ಣೀರಿಟ್ಟಿದ್ದಾರೆ. ಸದಾ ನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಶುಭಾ ಕಣ್ಣೀರು ಕಂಡು ಅಭಿಮಾನಿಗಳು ಶಾಕ್ ಆಗಿದ್ದು, ಅವರ ನಿಷ್ಕಲ್ಮಶ ಮನಸ್ಸಿಗೆ ಫಿಧಾ ಆಗಿದ್ದಾರೆ.

ಸ್ಪರ್ಧಿ ಟಿಕ್‍ಟಾಕ್ ಸ್ಟಾರ್ ಧನುಶ್ರೀ ನೀಡಿದ ಬಾಲ್‍ಗಳಲ್ಲಿಯ ಕೀಗಳ ಬಣ್ಣದ ಆಧಾರದ ಮೇಲೆ ಬಿಗ್‍ಬಾಸ್ ಟೀಂ ರಚಿಸಿ ಮೊದಲ ಟಾಸ್ಕ್ ನೀಡಿದ್ದರು. ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ನಿರ್ಮಲಾ ಮತ್ತು ಧನುಶ್ರೀ ಅವರ ಕೆಂಪು ಬಣ್ಣದ ಟೀಂ ಬಿಗ್‍ಬಾಸ್ ನೀಡಿದ ಸೋಲುಂಡ ಟವರು ಟಾಸ್ಕ್ ನಲ್ಲಿ ಸೋತಿತ್ತು. ಹಾಗಾಗಿ ಬಿಗ್‍ಬಾಸ್ ನಿಮ್ಮ ನಾಲ್ವರಲ್ಲಿ ಒಬ್ಬರನ್ನ ಲೂಸರ್ ಎಂದು ತೀರ್ಮಾನಿಸಿ ಎಂದು ಹೇಳಿತ್ತು. ಅದರಂತೆ ನಾಲ್ವರು ಐಸ್-ಪೈಸ್ ಹಾಕಿದ್ರೂ, ಯಾರು ಲೂಸರ್ ಅಂತ ನಿರ್ಧರಿಸಲು ಕಷ್ಟವಾಗಿತ್ತು.

Shubha

ಐಸ್-ಪೈಸೆ ಹಾಕಿ ಲೂಸರ್ ಅಂತ ಡಿಸೈಡ್ ಮಾಡೋದು ತಪ್ಪೆಂದು ನಾಲ್ವರಲ್ಲಿ ಗೊಂದಲ ನಿರ್ಮಾಣವಾಯ್ತು. ಕೊನೆಗೆ ಶಿಕ್ಷೆ ನೀಡಿದ್ರೆ ನಾಲ್ವರನ್ನ ಮನೆಯಿಂದ ಹೊರ ಹೋಗುವ ಸದಸ್ಯರ ಲಿಸ್ಟ್ ನಲ್ಲಿ ನಾಮಿನೇಟ್ ಮಾಡಿ ಎಂದು ಬಿಗ್‍ಬಾಸ್ ಬಳಿ ಕೇಳಿಕೊಂಡು ನಿರ್ಮಲಾ ಲೂಸರ್ ಎಂದು ತೀರ್ಮಾನಿಸಿ ಬಿಗ್‍ಬಾಸ್‍ಗೆ ಹೇಳಲಾಯ್ತು. ಲೂಸರ್ ಆಗಿದ್ದ ನಿರ್ಮಲಾ ನೇರವಾಗಿ ನಾಮಿನೇಟ್ ಮಾಡಲಾಯ್ತು. ಹಾಗಾಗೆ ಎಲ್ಲ ಲಗೇಜ್ ಸ್ಟೋರ್ ರೂಮಿನಲ್ಲಿ ತಂದಿರಿಸುವಂತೆ ಬಿಗ್‍ಬಾಸ್ ಆದೇಶಿಸಿದ್ದರು. ಇದನ್ನೂ ಓದಿ: ಒಂಟಿ ಮನೆಯ ಫಸ್ಟ್ ಡೇ ಪ್ರೇಮ್ ಕಹಾನಿ

vlcsnap 2018 10 27 15h05m53s156 e1540633013118

ನಿರ್ಮಲಾ ಲಗೇಜ್ ಇಟ್ಟ ಬಳಿಕ ಸ್ಟೋರ್ ರೂಮ್ ಲಾಕ್ ಆಗಿದ್ದರಿಂದ ಭಾವುಕರಾದ ಶುಭಾ ಕಣ್ಣೀರು ಹಾಕಲು ಆರಂಭಿಸಿದರು. ಇದು ಗುಂಪು ಆಟ ಆಗಿದ್ದರಿಂದ ಸೋಲಿನಲ್ಲಿ ಎಲ್ಲರೂ ಸಮಾನರು ಅಂತ ಹೇಳಿ ಗಳಗಳನೇ ಅತ್ತರು. ನಂತರ ನಿರ್ಮಲಾ ಸೇರಿದಂತೆ ಮನೆಯ ಎಲ್ಲ ಸದಸ್ಯರು ಶುಭಾ ಅವರನ್ನ ಸಮಾಧಾನಪಡಿಸಿದರು. ಇದನ್ನೂ ಓದಿ: 7 ಬಾರಿ ಆಫರ್ ತಿರಸ್ಕರಿಸಿದ್ದ ಶುಭಾ ಬಿಗ್ ಮನೆಗೆ ಹೋಗಿದ್ಯಾಕೆ?

Share This Article
Leave a Comment

Leave a Reply

Your email address will not be published. Required fields are marked *