ನವದೆಹಲಿ: ನಿಮಗಿದು ಗೊತ್ತಾ, ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮೊದಲ ಬಾಲ್‍ಗೆ ರನೌಟ್ ಆಗಿದ್ದರು.
ಹೌದು. ಮಹೇಂದ್ರ ಸಿಂಗ್ ಧೋನಿ ಡಿಸೆಂಬರ್ 23, 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನ ಮೊದಲ ಪಂದ್ಯದಲ್ಲಿ ಮೊದಲ ಬಾಲ್‍ಗೆ ರನ್ ಔಟ್ ಆಗಿದ್ದರೆ ಜುಲೈ 10, 2019ರಲ್ಲಿ ನಡೆದ ಕೊನೆಯ ಅಂತರಾಷ್ಟ್ರೀಯ ಪಂದ್ಯದಲ್ಲಿ ಕೇವಲ 72 ಬಾಲ್‍ಗಳಲ್ಲಿ 50 ರನ್ ಗಳಿಸಿ ರನ್ ಔಟ್ ಆಗಿದ್ದರು.
Advertisement
Advertisement
2019 ಏಕದಿನ ವಿಶ್ವಕಪ್ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಸೆಮಿಫೈನಲ್‍ನಲ್ಲಿ ಸೋತು ಹಿಂದಿರುಗಿತ್ತು. ನ್ಯೂಜಿಲೆಂಡ್ ವಿರುದ್ಧದ ಸೆಮಿಸ್‍ನಲ್ಲಿ ನಡೆದ ಪಂದ್ಯದಲ್ಲಿ ಧೋನಿ ರನೌಟ್ ಆಗುವ ಮೂಲಕ ಹೊರ ನಡೆದಿದ್ದರು. ಧೋನಿಯವರ ರನೌಟ್ ತಂಡವನ್ನು ಜಯದಿಂದ ದೂರ ಮಾಡಿತ್ತು. ಈ ರನೌಟ್ ಕುರಿತು ಧೋನಿ ನಂತರದ ದಿನಗಳಲ್ಲಿ ಪ್ರತಿಕ್ರಿಯೆ ನೀಡಿದ್ದರು. ತಮ್ಮ ವೃತ್ತಿ ಜೀವನ ಮೊದಲ ಮ್ಯಾಚ್‍ನಲ್ಲಿ ರನೌಟ್ ಆದ ರೀತಿಯಲ್ಲೇ ಸೆಮಿಸ್‍ನಲ್ಲೂ ರನೌಟ್ ಆಗಿರುವುದಾಗಿ ನೆನಪಿಸಿಕೊಂಡಿದ್ದರು.
Advertisement
ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ಸೋಲುಂಡಿತ್ತು. ಪಂದ್ಯದಲ್ಲಿ ಟೀಂ ಇಂಡಿಯಾ 241 ರನ್ ಗುರಿ ತಲುಪಲು ವಿಫಲವಾಗಿತ್ತು. ತಂಡದ ಆರಂಭಿಕ ಆಟಗಾರರು ವಿಫಲರಾದ ಬಳಿಕ ಜಡೇಜಾ (77 ರನ್), ಧೋನಿ (50 ರನ್) ಗಳಿಸಿ ಆಸೆಯಾಗಿದ್ದರು. ಈ ಹಂತದಲ್ಲಿ ಧೋನಿ ರನೌಟ್ ಆಗಿದ್ದರು. ರನೌಟ್ ಕುರಿತು ಧೋನಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.
Advertisement
ಪಂದ್ಯದ ಸೋಲಿನ ಬಳಿಕ ನಾನು ಹಲವು ಬಾರಿ ಏಕೆ ಡೈವ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡುಕೊಂಡಿದ್ದೇನೆ. ಕೇವಲ 2 ಇಂಚಿನ ಅಂತರದಲ್ಲಿ ರನೌಟ್ ಆಯ್ತು, ನಾನು ಡೈವ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದರು.
ಪಂದ್ಯದಲ್ಲಿ ಧೋನಿ-ಜಡೇಜಾ ಜೋಡಿ 116 ರನ್ ಗಳಿಸಿದ ಸಂದರ್ಭದಲ್ಲಿ ಟೀಂ ಇಂಡಿಯಾ ಗೆಲ್ಲುವ ವಿಶ್ವಾಸವಿತ್ತು. ಅಂತಿಮ 2 ಓವರ್ ಗಳಲ್ಲಿ 31 ರನ್ ಅಗತ್ಯವಿತ್ತು. ಓವರಿನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಧೋನಿ ಅರ್ಧ ಶತಕ ಪೂರ್ಣಗೊಳಿಸಿದ್ದರು. 2ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 3ನೇ ಎಸೆತದಲ್ಲಿ ಇಲ್ಲದ 2 ರನ್‍ಗೆ ಓಡಲು ಧೋನಿ ಮುಂದಾಗಿ ಮಾರ್ಟಿನ್ ಗಪ್ಟಿಲ್ ಅದ್ಭುತ ಥ್ರೋನಿಂದ ರನೌಟ್ ಆಗಿದ್ದರು. ಆ ಬಳಿಕ ಚಹಲ್, ಭುವನೇಶ್ವರ್ 5 ರನ್ ಗಳಿಸಿ ಔಟಾಗಿದ ಪರಿಣಾಮ 221 ರನ್ ಗಳಿಗೆ ಆಲೌಟ್ ಆಗುವ ಮೂಲಕ 18 ರನ್ ಅಂತರದಲ್ಲಿ ತಂಡ ಸೋಲುಂಡಿತ್ತು.
ಸೆಮಿಫೈನಲ್ ಪಂದ್ಯದ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದರು. ಕೆಲ ಸಮಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಧೋನಿ, ಆ ಬಳಿಕ ನಡೆದ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡಗಳ ವಿರುದ್ಧದ ಸರಣಿಯಿಂದ ದೂರ ಉಳಿದಿದ್ದರು.