ಬೆಂಗಳೂರು: ಕೇಂದ್ರ ಬಜೆಟ್‍ಗೆ ಜನಸಾಮಾನ್ಯರ ಮಿಶ್ರ ಅಭಿಪ್ರಾಯಕ್ಕೆ ಕಾರಣವಾಗಿದೆ. ಆಟೋ, ಟ್ಯಾಕ್ಸಿ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಗಾರರು, ಸಾರಿಗೆ ತಜ್ಞರು, ಹೋಟೆಲ್ ಉದ್ಯಮದವರಿಗೆ ಸಾಕಷ್ಟು ನಿರಾಸೆ ಮೂಡಿಸಿದೆ.
ತೈಲಗಳ ಬೆಲೆಯಲ್ಲಿ ಇಳಿಕೆ ಕಂಡಿಲ್ಲ, ಆಟೋ ಬಿಡಿಭಾಗಗಳ ದುಬಾರಿ ಎಂಬ ವಿಚಾರ ಆಟೋ ಚಾಲಕರು ಹಾಗೂ ದ್ವಿಚಕ್ರ, ಕಾರು ಚಾಲಕರ ಜೀಬಿಗೆ ಕತ್ತರಿ ಬೀಳಿಸಿದೆ. ಸದ್ಯ ಕೊರೋನಾ ಕಾರಣಕ್ಕೆ ಸಾಕಷ್ಟು ಸಬ್ಸಿಡಿ ಕೊಡಿಸಿ ತೈಲ ಬೆಲೆ ಇಳಿಸುತ್ತಾರೆ ಎಂಬ ನಂಬಿಕೆ ಇತ್ತು ಎಂದು ಚಾಲಕರು ಬೇಸರ ಹೊರಹಾಕಿದ್ದಾರೆ.
Advertisement
Advertisement
ಹೋಟೆಲ್ ಉದ್ಯಮದಲ್ಲಿರುವ ಮಾಲೀಕರಂತೂ ಕೊರೋನಾದಿಂದ ನಷ್ಟ ಉಂಟಾಗಿದೆ. ಹೋಟೆಲ್ ಉದ್ಯಮಕ್ಕೆ ಉತ್ತಮ ಪ್ಯಾಕೇಜ್ ಕೊಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇವು. ಆದರೆ ಯಾವುದೇ ಪ್ಯಾಕೇಜ್ ಸಿಗದೇ ಇರುವುದರ ಕುರಿತಾಗಿ ಹೋಟೆಲ್ ಮಾಲೀಕರ ಸಂಘ ಪಿ ಸಿ ರಾವ್ ಅಸಮಾಧಾನ ಹೊರ ಹಾಕಿದ್ದಾರೆ.
Advertisement
Advertisement
ಮೂಲಭೂತ ಸೌಕರ್ಯಕ್ಕೆ ಬೆಂಬಲ ವಿಚಾರದಲ್ಲಂತೂ ಕಡೆಗಣಿಸಲಾಗಿದೆ. ಆದರೆ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ಹೀಗಾಗಿ ಮೆಟ್ರೋ ವಿಚಾರವಾಗಿ ಹಣ ಎತ್ತಿಟ್ಟಿರುವುದು ಬಿಟ್ಟು ಉಳಿದೆಲ್ಲ ಬೇಸರ ತಂದಿದೆ. ಆದರೂ ದೇಶದ ಹಿತಕ್ಕೆ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ ಎಂದು ಸಾರಿಗೆ ತಜ್ಞ ಶ್ರೀಹರಿ ಹೇಳಿದ್ದಾರೆ.