ಮೊದಲು ಮಗ ನಂತ್ರ ತಾಯಿ ವಿಷ ಸೇವನೆ- ಇದನ್ನ ನೋಡಿ ಪತ್ನಿಯೂ ಕುಡಿದ್ಲು

Public TV
2 Min Read
KLR 3

– ಮನೆಯಲ್ಲಿಯೇ ಅತ್ತೆ, ಸೊಸೆ ಸಾವು
– ಸಾವು ಬದುಕಿನ ಮಧ್ಯೆ ಹೋರಾಡ್ತಿರೋ ಮಗ

ಕೋಲಾರ: ಕುಟುಂಬವೊಂದು ಅನಾರೋಗ್ಯದಿಂದ ಬಳಲಿ ಬಳಲಿ ಸಹಿಸಿಕೊಳ್ಳಲಾಗದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಒಬ್ಬ ಬಚಾವಾಗಿರುವ ಘಟನೆ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ತಿರುಮಲ ಕಲ್ಯಾಣ ಮಂಟಪ ಬಳಿಯ ಆರ್.ಪಿ.ಲೇಔಟ್‍ನಲ್ಲಿ ಈ ಘಟನೆ ನಡೆದಿದೆ. ತಾಯಿ ಆದಿ ಲಕ್ಷ್ಮಮ್ಮ (70) ಮತ್ತು ಸೊಸೆ ಪದ್ಮಾ (46) ಮೃತ ಅತ್ತೆ-ಸೊಸೆ. ಗುರುವಾರ ರಾತ್ರಿ ಮನೆಯಲ್ಲಿ ಎಂದಿನಂತೆ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಗಿದೆ. ಆಗ ತಾಯಿ, ಸೊಸೆ ಪದ್ಮಾ ಮತ್ತು ಮಗ ನಾಗರಾಜ್ (55) ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪರಿಣಾಮ ವಿಷ ಕುಡಿದ ಅತ್ತೆ ಮತ್ತು ಸೊಸೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ನಾಗರಾಜ್ ಸ್ಥಿತಿ ಗಂಭೀರವಾಗಿದೆ.

vlcsnap 2020 06 20 08h29m09s062

ಶುಕ್ರವಾರ ಬೆಳಗ್ಗೆ ನಾಗರಾಜ್ ತನ್ನ ಅಣ್ಣನ ಮಗನಿಗೆ ಫೋನ್ ಮಾಡಿ ರಾತ್ರಿ ಎಲ್ಲರೂ ವಿಷ ಕುಡಿದಿರುವ ವಿಷಯ ತಿಳಿಸಿದ್ದ. ತಕ್ಷಣ ಸ್ಥಳಕ್ಕೆ ಬಂದ ಮಗ ವಿಜಯ್ ಸಾವು ಬದುಕಿನ ನಡುವೆ ಇದ್ದ ನಾಗರಾಜ್‍ನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಜಗಳ ನಡೆದಿದ್ದೇಕೆ?
ಕಳೆದ ಕೆಲವು ತಿಂಗಳುಗಳಿಂದ ನಾಗರಾಜ್ ಪತ್ನಿ ಪದ್ಮಾಗೆ ಕಾಲು ನೋವಿನ ಸಮಸ್ಯೆ ಕಾಡುತ್ತಿತ್ತು. ಆಸ್ಪತ್ರೆಗೆ ತೋರಿಸಿದರೂ ಪ್ರಯೋಜವಾಗಿರಲಿಲ್ಲ. ಹಾಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ತೋರಿಸಿದ್ದರು. ಅಲ್ಲಿ 1.5 ಲಕ್ಷದಷ್ಟು ಹಣ ಖರ್ಚಾಗುತ್ತದೆ ಅಂತ ಹೇಳಿದ್ದಾರೆ. ಆದರೆ ನಾಗರಾಜ್ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದನು. ಹೀಗಾಗಿ ಪತ್ನಿಗೆ ಚಿಕಿತ್ಸೆ ಕೊಡಿಸುವಷ್ಟು ಹಣ ಇರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಪತ್ರಿನಿತ್ಯ ಜಗಳ ನಡೆಯುತ್ತಿತ್ತು.

vlcsnap 2020 06 20 08h29m30s903

ಅದರಂತೆ ಗುರುವಾರ ಕೂಡ ಇದೇ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ನಾಗರಾಜ್ ತಾನು ಸಾಯೋದಾಗಿ ಹೇಳಿ ವಿಷ ತಂದು ತಾನು ಕುಡಿದು ಮಲಗಿದ್ದಾನೆ. ಇದನ್ನು ಕಂಡ ನಾಗರಾಜ್ ತಾಯಿ ಕೂಡ ವಿಷ ಕುಡಿದಿದ್ದಾಳೆ. ಇವರಿಬ್ಬರನ್ನು ಕಂಡ ಪತ್ನಿ ಕೂಡ ಉಳಿದ ವಿಷ ಕುಡಿದು ಮಲಗಿದ್ದಾಳೆ. ಆದರೆ ಈ ಪೈಕಿ ನಾಗರಾಜ್ ತಾಯಿ ಮತ್ತು ಪತ್ನಿ ಇಬ್ಬರೂ ಮೃತಪಟ್ಟರೆ ನಾಗರಾಜ್ ವಾಂತಿ ಮಾಡಿಕೊಂಡು ಬೆಳಗ್ಗೆವರೆಗೂ ಒದ್ದಾಡಿದ್ದಾನೆ. ಬೆಳಗ್ಗೆ ವೇಳೆಗೆ ನಾಗರಾಜ್ ತನ್ನ ಅಣ್ಣನ ಮಗ ವಿಜಯ್‍ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಆತ ಬಂದು ಆಸ್ಪತ್ರೆಗೆ ಸೇರಿಸಿ ನಂತರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾನೆ ಎಂದು ಸ್ಥಳೀಯ ಇಂತಿಯಾಜ್ ಖಾನ್ ತಿಳಿಸಿದ್ದಾರೆ.

vlcsnap 2020 06 20 08h28m25s753

Share This Article
Leave a Comment

Leave a Reply

Your email address will not be published. Required fields are marked *