ಮೈಸೂರು : ಮಹಾನಗರ ಪಾಲಿಕೆ ಮೇಯರ್ ಗದ್ದುಗೆ ಹಿಡಿಯುವ ವಿಚಾರದಲ್ಲಿ ಮೂರು ರಾಜಕೀಯ ಪಕ್ಷಗಳು ಪೈಪೋಟಿಗೆ ಇಳಿದಿದ್ದು, ರಾಜಕೀಯ ಪಕ್ಷಗಳ ಮೈತ್ರಿ ಗೊಂದಲದಲ್ಲಿ ಮುಳುಗಿಹೋಗಿ ಮೈಸೂರಿನ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ.
ಮೇಯರ್, ಉಪಮೇಯರ್ ಅವಧಿ ಮುಗಿದರೂ ಮೈತ್ರಿ ಬಗ್ಗೆ ಸ್ಪಷ್ಟತೆ ಇಲ್ಲ. ಮೂರು ಪಕ್ಷಗಳಲ್ಲಿ ಮೇಯರ್ ಪಟ್ಟಕ್ಕೆ ಜೋತು ಬಿದ್ದಿದ್ದು ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂಬ ಸ್ಪಷ್ಟತೆ ಯಾರಿಗೂ ಇಲ್ಲ.
Advertisement
Advertisement
ಕಾಂಗ್ರೆಸ್, ಜೆಡಿಎಸ್, ಬಿಜೆಪಿಗಳಲ್ಲಿ ಮೈತ್ರಿಯದ್ದೆ ಮಾತು ನಡೆಯುತ್ತಿದೆ. ಹಾಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿರುವ ಪಾಲಿಕೆ ಆಡಳಿತವಿದೆ. ಹಳೆ ಮೈತ್ರಿ ಮುಂದುವರೆಸಿ ನಮಗೆ ಮೇಯರ್ ಸ್ಥಾನ ನೀಡಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಮೇಯರ್ ಸ್ಥಾನ ನಮಗೆ ಬೇಕು ಹಾಗಾಗಿ ನಾವು ಮೈತ್ರಿ ಮುರಿದುಕೊಳ್ಳುತ್ತೇನೆ ಎಂದು ಜೆಡಿಎಸ್ ಹೇಳುತ್ತಿದೆ.
Advertisement
ಮೇಯರ್ ಸ್ಥಾನ ನಮಗೆ ನೀಡಿದರೆ ನಿಮ್ಮ ಜೊತೆ ಮೈತ್ರಿ ಮಾಡುತ್ತೇವೆ ಎಂದು ಬಿಜೆಪಿ ಜೆಡಿಎಸ್‌ಗೆ ಸಂದೇಶ ರವಾನಿಸಿದೆ. ಮೇಯರ್, ಉಪಮೇಯರ್ ಅವಧಿ ಮುಗಿದು 10 ದಿನ ಕಳೆದರೂ ಇನ್ನು ಮೀಸಲಾತಿ ಪ್ರಕಟವಾಗಿಲ್ಲ. ಮೀಸಲಾತಿ ಪ್ರಕಟವಾಗದೆ ಚುನಾವಣೆ ದಿನಾಂಕವು ಪ್ರಕಟವಾಗುವುದಿಲ್ಲ.
Advertisement
ಕಳೆದೊಂದು ವರ್ಷದಿಂದ ಕೋವಿಡ್ ಹಿನ್ನಲೆಯಲ್ಲಿ ಅಭಿವೃದ್ದಿಯಲ್ಲಿ ಕುಂಠಿತವಾಗಿತ್ತು. ಇದೀಗ ಮೈತ್ರಿ ವಿಚಾರವಾಗಿ ಮತ್ತೆ ಅಭಿವೃದ್ದಿಯಿಂದ ಮೈಸೂರು ವಂಚಿತವಾಗುತ್ತಿದೆ. ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಕೇಳುವುದಕ್ಕೂ ಪಾಲಿಕೆಯ ಆಡಳಿತ ವ್ಯವಸ್ಥೆ ಇಲ್ಲ.
65 ಸಂಖ್ಯಾಬಲದ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, 5 ಇತರೇ ಒಬ್ಬರು ಬಿಎಸ್‌ಪಿ ಸದಸ್ಯರಿದ್ದಾರೆ.