ಮೈಸೂರು: ದಿನ ದಿನಕ್ಕೂ ಕೊರೊನಾ ಪ್ರಕರಣಗಳ ಸಂಖ್ಯೆ ಇಡೀ ಮೈಸೂರೇ ಬೆಚ್ಚುವಂತೆ ಏರುತ್ತಿದೆ. ಕಳೆದ ಒಂದು ವಾರದಲ್ಲಿ ಮೈಸೂರಲ್ಲಿ 1,300 ಪಾಸಿಟಿವ್ ಕೇಸ್ ಬಂದಿವೆ. ಪ್ರತಿ ದಿನ ಸರಾಸರಿ 150 ಪಾಸಿಟಿವ್ ಪ್ರಕರಣ ದಾಖಲಾಗುತ್ತಿವೆ. ಒಂದು ವಾರದಲ್ಲಿ 45 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
Advertisement
ಮೈಸೂರಿನಲ್ಲಿ ಭಾನುವಾರದವರೆಗೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,867 ಇಷ್ಟು ವೇಗವಾಗಿ ಸೋಂಕು ಹರಡುತ್ತಿರುವುದು ಇಡೀ ಮೈಸೂರನ್ನು ಆತಂಕಕ್ಕೆ ಒಳಗಾಗಿಸಿದೆ. ಮೈಸೂರಿನ ಪ್ರತಿಷ್ಠಿತ ಜೆ.ಕೆ. ಟೈರ್ಸ್ ಕಂಪನಿಯ ಕಾರ್ಮಿಕರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ದೃಢವಾಗಿದೆ. ಇನ್ನೂ ಹಲವು ಕಾರ್ಖಾನೆಗಳಲ್ಲಿ ಸಾಮೂಹಿಕವಾಗಿ ಸೋಂಕು ಹಬ್ಬಿರುವುದು ಸೋಂಕಿನ ಪ್ರಕರಣ ಹೆಚ್ಚಾಗೋಕೆ ಕಾರಣವಾಗಿದೆ. ಇದರ ಜೊತೆಗೆ ಮೈಸೂರಿನ ಎನ್.ಆರ್. ಕ್ಷೇತ್ರ ವ್ಯಾಪ್ತಿಯಲ್ಲೂ ಜನರು ಕೊರೊನಾದ ಲಕ್ಷಣಗಳಿದ್ದರೂ ಟೆಸ್ಟಿಂಗ್ ಗೆ ಒಳಗಾಗದೆ ಇರುವುದು ಕೂಡ ಸೋಂಕು ಹೆಚ್ಚಾಗಲು ಕಾರಣವಾಗಿದೆ.
Advertisement
Advertisement
ಯಾವಾಗ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟವಾಯ್ತೋ ಎಚ್ಚೆತ್ತ ಮೈಸೂರು ಜಿಲ್ಲಾಡಳಿತ 5 ಸಾವಿರ ಬೆಡ್ ಗಳ ಆಸ್ಪತ್ರೆಯ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಖಾಸಗಿ ಆಸ್ಪತ್ರೆಯವರು ಕೂಡ ಕೈ ಜೋಡಿಸಿ ಪ್ರತ್ಯೇಕ ವಿಭಾಗ ತೆರೆಯುತ್ತಿದ್ದಾರೆ.
Advertisement