ಮೈಸೂರು: ಯುವರತ್ನ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಯುವರತ್ನ ಚಿತ್ರ ತಂಡ ಸಿನಿಮಾ ಪ್ರಚಾರ ರ್ಯಾಲಿ ನಡೆಸಿತು.
ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಹೂ ಮಳೆ ಸುರಿಸುತ್ತಾ ಬರ ಮಾಡಿಕೊಂಡರು. ನಟ ಡಾಲಿ ಧನಂಜಯ, ಚಿತ್ರದ ನಿರ್ದೇಶಕ ಸಂತೋಷ್ ಜೊತೆ ಇದ್ದರು.
ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಮೂಲಕ ಇಡೀ ಚಿತ್ರ ತಂಡವನ್ನು ಸ್ವಾಗತಿಸಿದರು. ಡಾಲಿ ಧನಂಜಯ, ಯುವ ರತ್ನ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳ ರಂಜಿಸಿದರು. ಪುನೀತ್ ರಾಜಕುಮಾರ್, ಮೈಸೂರಿನ ಮಹಾರಾಜರು, ಸರ್.ಎಂ. ವಿಶ್ವೇಶ್ವರಯ್ಯ ಇವರೆಲ್ಲರನ್ನು ನೆನೆದು ಮೈಸೂರಿನ ನೆನಪುಗಳ ಬಿಚ್ಚಿಟ್ಟರು. ಯುವರತ್ನ ಚಿತ್ರದ ಹಾಡು ಹೇಳಿ, ನೃತ್ಯ ಮಾಡಿ ರಂಜಿಸಿದರು.
ಈ ಹಿಂದೆ ಕಲಬುರಗಿ ಹಾಗೂ ಬಳ್ಳಾರಿಗೂ ಪುನೀತ್ ಭೇಟಿ ನೀಡಿ ದೇವಾಲಯಗಳ ದರ್ಶನ ಪಡೆದು ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದರು. ಎರಡೂ ಜಿಲ್ಲೆಯಲ್ಲಿಯೂ ‘ಯುವರತ್ನ’ನಿಗೂ ಅದ್ಧೂರಿ ಸ್ವಾಗತ ಕೋರಲಾಗಿತ್ತು.