ಮೈಸೂರು: ಕೊರೊನಾ ತಡೆಗಾಗಿ ಜನರು ಮೂಢನಂಬಿಕೆಯ ಮೊರೆ ಹೋಗಿದ್ದು, ಮೈಸೂರಿನಲ್ಲಿ ಮಹಾಮಾರಿ ತಡೆಗಾಗಿ ರಾತ್ರಿ ರಾಕ್ಷಸಿ ಪೂಜೆ ಮಾಡಿ ರಕ್ತದ ಅನ್ನ ನೈವೇದ್ಯೆ ನೀಡಿದ್ದಾರೆ.
ಮೈಸೂರಿನ ಗಾಯತ್ರಿಪುರಂ 2ನೇ ಹಂತದಲ್ಲಿ ರಾಕ್ಷಸಿ ಪೂಜೆ ನಡೆಸಲಾಗಿದೆ. ಸ್ಥಳೀಯರೆಲ್ಲ ಒಟ್ಟಾಗಿ ಬೃಹದಾಕಾರ ರಾಕ್ಷಸಿ ಚಿತ್ರ ಬಿಡಿಸಿ ಕೋಳಿಯನ್ನು ಬಲಿ ನೀಡಿದ್ದಾರೆ. ಕೋಳಿಯ ರಕ್ತದಿಂದ ಅನ್ನವನ್ನು ಮಾಡಿ ನೈವೇದ್ಯವಾಗಿ ನೀಡಲಾಗಿದೆ. ರಕ್ತದ ಅನ್ನದ ಜೊತೆ ಬೂದಿ ಮಿಶ್ರಿತ ಮತ್ತು ಅರಿಶಿನದ ಅನ್ನವನ್ನು ರಾಕ್ಷಸಿಗೆ ಅರ್ಪಿಸಿ ಕೊರೊನಾ ಬರದಿರಲಿ ಎಂದು ಪ್ರಾರ್ಥಿಸಿದ್ದಾರೆ.
Advertisement
ರಾತ್ರೋ ರಾತ್ರಿ ಈ ಪೂಜೆ ನಡೆಸಲಾಗಿದೆ. ಬೆಳಗ್ಗೆ ವಾಹನ ಸವಾರರು ರಸ್ತೆಯಲ್ಲಿ ವಿಚಿತ್ರ ಆಚರಣೆ ಕಂಡು ಭಯಗೊಂಡಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರದ ಜನತೆ ಗ್ರಾಮದ ಪಶ್ಚಿಮಕ್ಕೆ ಇರುವ ಬೇವಿನ ಮರಕ್ಕೆ ಪೂಜೆ ಸಲ್ಲಿಸಿದ್ದರು. ತುಮಕೂರಿನಲ್ಲಿ ಮೂರ್ತಿ ಮಾಡಿ ಕೊರೊನಾಮ್ಮ ಅಂತ ಹೆಸರಿಟ್ಟು ಪೂಜೆ ಮಾಡಲಾಗಿತ್ತು.
Advertisement