ಮೈಸೂರು: ಚೀನಿ ವೈರಸ್ ಕೊರೊನಾ ರಾಜ್ಯದಲ್ಲಿ ತಾಂಡವಾಡುತ್ತಿದ್ದು, ಮೈಸೂರಿನಲ್ಲಿ ಕೋವಿಡ್ 19ಗೆ ಸರ್ಕಾರಿ ಅಧಿಕಾರಿ ಹಾಗೂ ಅವರ ಮಗ ಬಲಿಯಾಗಿದ್ದಾರೆ.
ಕೃಷಿ ಇಲಾಖೆ ಸಹಾಯಕ ಎಂಜಿನಿಯರ್ ಮನೆಯಲ್ಲಿ ಕೊರೊನಾ ಅಟ್ಟಹಾಸ ಮೆರೆದಿದ್ದು, 4 ದಿನಗಳ ಅಂತರದಲ್ಲಿ ತಂದೆ-ಮಗ ಇಬ್ಬರನ್ನು ಮಹಾಮಾರಿ ಬಲಿ ಪಡೆದಿದೆ.
Advertisement
Advertisement
ಜು.15ರಂದು 14 ವರ್ಷದ ಪುತ್ರ ಮೃತಪಟ್ಟರೆ, ನಿನ್ನೆ ರಾತ್ರಿ 47 ವರ್ಷದ ಎಂಜಿನಿಯರ್ ಸಾಬನ್ನಪ್ಪಿದ್ದಾರೆ. ಇಡೀ ಕುಟುಂಬಕ್ಕೆ ಕೊರೊನಾ ಹರಡಿದ್ದು, ಪಾಸಿಟಿವ್ ಧೃಢವಾಗಿ ಕಳೆದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿತ್ತು.
Advertisement
ಎಂಜಿನಿಯರ್ ತಮ್ಮ ಪತ್ನಿ ಹಾಗೂ ಮೂವರು ಮಕ್ಕಳ ಸಮೇತ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಎಂಜಿನಿಯರ್ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಮಕ್ಕಳು ಹಾಗೂ ಪತ್ನಿಗೆ ಕೋವಿಡ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಇತ್ತ ಮೂರು ದಿನಗಳ ಹಿಂದೆ 14 ವರ್ಷದ ಪುತ್ರ ಸಾವನ್ನಪ್ಪಿದ್ದನು. ಇದೀಗ ತಂದೆ ಕೂಡ ಮಗನನ್ನೇ ಹಿಂಬಾಲಿಸಿದ್ದು, ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪುತ್ರನ ಅಂತಿಮ ದರ್ಶನ ಪಡೆಯಲಾಗದ ತಂದೆ-ತಾಯಿ ಹಾಗೂ ಅಕ್ಕಂದಿರು, ಇದೀಗ ಎಂಜಿನಿಯರ್ ಅಂತ್ಯಕ್ರಿಯೆಯಲ್ಲೂ ಭಾಗಿಯಾಗದೆ ಕಣ್ಣೀರು ಹಾಕುತ್ತಿದ್ದಾರೆ.