– ಕಹಿ ಘಟನೆಯನ್ನು ಹಂಚಿಕೊಂಡ ಅಶ್ವಿನ್
– ಬಯೋ ಬಬಲ್‍ನಲ್ಲಿದ್ದರೂ ದೂರವಿಟ್ಟಿದ್ದ ಆಸೀಸ್
ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಸಿಸ್ ಆಟಗಾರರೊಂದಿಗೆ ಲಿಫ್ಟ್‍ನಲ್ಲೂ ಕೂಡ ಜೊತೆಯಾಗಿ ಪ್ರಯಾಣಿಸಲು ಅವಕಾಶ ಇರಲಿಲ್ಲ ಎಂಬ ಕಹಿ ಘಟನೆಯೊಂದನ್ನು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಿಚ್ಚಿಟ್ಟಿದ್ದಾರೆ.
Advertisement
ಸಾಮಾಜಿಕ ಜಾಲತಾಣದಲ್ಲಿ ಭಾರತದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಜೊತೆ ಈ ಮಾತನ್ನು ಅಶ್ವಿನ್ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಸ್ಟ್ರೇಲಿಯಾ ಆಟಗಾರರೂ ಮತ್ತು ಅಲ್ಲಿನ ಅಭಿಮಾನಿಗಳು ಪದೇ ಪದೇ ಭಾರತದ ಆಟಗಾರೊಂದಿಗೆ ಒಂದಲ್ಲ ಒಂದು ಕಾರಣಗಳಿಂದ ಕೆಣಕುತ್ತಿದ್ದರು. ಇದೇ ರೀತಿ ಆಸ್ಟ್ರೇಲಿಯಾ ಮತ್ತು ಭಾರತ ತಂಡದ ಎಲ್ಲಾ ಸದಸ್ಯರು ಸರಣಿಯಲ್ಲಿ ಭಾಗವಹಿಸುವಾಗ ಕೊರೊನಾ ಮುನ್ನೆಚ್ಚರಿಕೆಯಾಗಿ ಬಯೋ ಬಬಲ್‍ನಲ್ಲಿದ್ದರು. ಆದರೂ ಕೂಡ ಆಸ್ಟ್ರೇಲಿಯಾ ತಂಡ ಭಾರತೀಯ ಆಟಗಾರರನ್ನು ತುಂಬಾ ದೂರವಿಟ್ಟಿತ್ತು. ನಾವು ಅವರೊಂದಿಗೆ ಲಿಫ್ಟ್‍ನಲ್ಲಿ ಕೂಡ ಜೊತೆಯಾಗಿ ಹೊಗಲು ಅವಕಾಶ ಕೊಡುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
Advertisement
ಇದಕ್ಕೆ ಉತ್ತರಿಸಿದ ಆರ್ ಶ್ರೀಧರ್ ನಾವು ಒಂದೇ ಬಯೋ ಬಬಲ್‍ನಲ್ಲಿದ್ದರೂ ಕೂಡ ಅವರು ನಮ್ಮಿಂದ ಆ ರೀತಿಯ ಅಂತರ ಕಾಯ್ದುಕೊಂಡಿರುವುದು ಅರಗಿಸಿಕೊಳ್ಳಲು ಆಗಿರಲಿಲ್ಲ. ಅವರು ಆ ರೀತಿ ನಮ್ಮನ್ನು ನೋಡಿಕೊಳ್ಳಬಾರದಿತ್ತು ಎಂದು ಅಭಿಪ್ರಾಯಪಟ್ಟರು.
Advertisement
ಬ್ರಿಸ್ಬೇನ್‍ನಲ್ಲಿ ಕೊನೆಯ ಪಂದ್ಯವಾಡಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಹೊಟೇಲ್ ಒಂದರಲ್ಲಿ ಉಳಿದುಕೊಂಡಿತ್ತು. ಈ ವೇಳೆ ಈ ಕಹಿ ಘಟನೆ ನಡೆದಿದೆ. ಆದರೂ ಈ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು 2-1 ಅಂತರದಲ್ಲಿ ಸರಣಿ ಗೆದ್ದು ಐತಿಹಾಸಿಕ ಸಾಧನೆಯೊಂದಿಗೆ ಟೀಂ ಇಂಡಿಯಾ ತವರಿಗೆ ಮರಳಿದೆ.