ಮೇಘನಾ ರಾಜ್ ಹೆಸರಲ್ಲಿ ಮೂಡಿತು ಚಿರು ಫೋಟೋ – ಅಭಿಮಾನಿಯ ಕಲೆಗೆ ಕುಟ್ಟಿಮಾ ಫಿದಾ

Public TV
2 Min Read
MEGHANA

ಬೆಂಗಳೂರು: ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದ ಬಳಿಕ ಅವರ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಸದಾ ನೆನಪಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಅಭಿಮಾನಿಯ ಕೈಯಲ್ಲಿ ಅರಳಿದ ಚಿರು ಫೋಟೋವೋಮದು ಇದೀಗ ಗಮನಸೆಳೆದಿದೆ.

MEGHANA RAJ 1 1

ಹೌದು ಪತ್ನಿ ಮೇಘನಾ ರಾಜ್ ಹೆಸರಿನಲ್ಲಿ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಫೇಸ್ ಕಟ್ ಮೂಡಿ ಬಂದಿದೆ. ಅಭಿಮಾನಿಯ ಈ ಕಲೆಗೆ ಕುಟ್ಟಿಮಾ ಕೂಡ ಫಿದಾ ಆಗಿದ್ದಾರೆ. ಅಭಿಮಾನಿ ತಮ್ಮ ದಿವಂಗತ ಪತಿಯ ಫೋಟೋವನ್ನು ತನ್ನಹೆಸರಿನ ಮೂಲಕ ಬಿಡಿಸುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

kuttima

ಇನ್‍ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವ ಮೇಘನಾ ಅವರು ಅಭಿಮಾನಿಯ ಕಲೆಗೆ ಮೂಕವಿಸ್ಮಿತರಾಗಿದ್ದಾರೆ. ವೀಡಿಯೋದಲ್ಲಿ ಅಭಿಮಾನಿ, ಬರೀ ಮೇಘನಾ ರಾಜ್ ಹೆಸರಿನಲ್ಲಿ ಚಿರು ಮುಖವನ್ನು ಬಿಡಿಸಿದ್ದಾರೆ. ಸದ್ಯ ಈ ವೀಡಿಯೋವನ್ನು ಯುವ ಸಾಮ್ರಾಟ್ ಅಭಿಮಾನಿಗಳು ಕೂಡ ಶೇರ್ ಮಾಡಿಕೊಳ್ಳುತ್ತಿದ್ದಾರೆ.

meghana raj chiru sarja

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಇದೇ ಬೇಸರದಲ್ಲಿದ್ದ ಕುಟುಂಬಕ್ಕೆ ಇದೀಗ ಪುಟ್ಟ ಮಗುವಿನ ಆಗಮನದಿಂದ ಸಂತಸ ತಂದಿದೆ. ಮೇಘನಾ ಅವರು ಗಂಡು ಮಗುವಿನ ಜನ್ಮ ನೀಡಿದ ಬಳಿಕ ತಾಯಿ-ಮಗನ ಅನೇಕ ಫೋಟೋಗಳು ವೈರಲಾಗತೊಡಗಿದವು. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋಗೆ ಸ್ವತಃ ತಾವೇ ಸ್ಪಷ್ಟನೆ ಕೊಡುವ ಮೂಲಕ ಫುಲ್ ಸ್ಟಾಪ್ ಹಾಕಿದ್ದಾರೆ.

 

View this post on Instagram

 

A post shared by Artist (@chan_arts1)

ಮೇಘನಾ ಅವರು ಅಕ್ಟೋಬರ್ 22 ರಂದು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅಭಿಮಾನಿಗಳು ಚಿರುಗೆ ಗಂಡು ಮಗುವಾಗುತ್ತಿದ್ದಂತೆಯೇ ಸಂತಸ ಮುಗಿಲುಮುಟ್ಟಿತ್ತು. ಅಲ್ಲದೆ ಅದಾಗಲೇ ಜ್ಯೂನಿಯರ್ ಚಿರು ಅಂತಾನೇ ಹೆಸರಿಟ್ಟಿದ್ದಾರೆ. ಆ ಬಳಿಕದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವಾರು ಯೂಟ್ಯೂಬ್ ಚಾನೆಲ್ ಗಳಲ್ಲಿ ಮೇಘನಾ ಮಗು ಅಂತ ಬೇರೆ ಮಕ್ಕಳ ಫೋಟೋಗಳು ವೈರಲ್ ಆಗತೊಡಗಿದವು. ದಿನಕ್ಕೊಂದು ಫೋಟೋಗಳು ವೈರಲ್ ಆಗುತ್ತಿರುವುದನ್ನು ಗಮನಿಸುತ್ತಿದ್ದ ಮೇಘನಾ ಅವರು ಇದಕ್ಕೆ ಅಂತ್ಯ ಹಾಡಬೇಕು ಎಂದು ಕೊನೆಗೂ ಸ್ಪಷ್ಟನೆ ನೀಡಿ ಅಭಿಮಾನಿಗಳಲ್ಲಿ ಕ್ಷಮೆ ಕೇಳುವ ಮೂಲಕ ದೊಡ್ಡತನ ಮೆರೆದಿದ್ದರು.

chiranjeevi sarja Meghana raj

ಮೇಘನಾ ಹಾಗೂ ಅವರ ಕುಟುಂಬಸ್ಥರು ಜ್ಯೂನಿಯರ್ ಚಿರುವಿನ ನಾಮಕರಣವನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಯೋಜನೆ ಹಾಕಿದ್ದರು. ಈ ನಡುವೆ ಸುಂದರ್ ರಾಜ್ ದಂಪತಿ, ಮೇಘನಾ ಹಾಗೂ ಪುತ್ರನಿಗೆ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯ್ಲಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಆದರೆ ಶೀಘ್ರವೇ ನಾಮಕರಣ ಕಾರ್ಯಕ್ರಮವನ್ನು ಅನೌನ್ಸ್ ಮಾಡಲಿದ್ದು, ಅಭಿಮಾನಿಗಳು ಆ ದಿನಕ್ಕೋಸ್ಕರ ಕಾಯುತ್ತಿದ್ದಾರೆ.

 

View this post on Instagram

 

A post shared by Artist (@chan_arts1)

Share This Article
Leave a Comment

Leave a Reply

Your email address will not be published. Required fields are marked *