ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್‍ಗೆ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಮೇಘನಾ ರಾಜ್‍ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರೆಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.
ಮೇಘನಾನ ಮೆಚ್ಚಿನ ಆತ್ಮೀಯ ಗೆಳತಿ ಮಾಲಿವುಡ್‍ನ ಖ್ಯಾತ ನಟಿ ನಜ್ರಿಯಾ, ಚಿರು ಹಾಗೂ ಮೇಘನಾ ರಾಜ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.
ಮಾಲಿವುಡ್ ನಟಿ ನಜ್ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ, ಚಿರು, ಮೇಘನಾ ಮತ್ತು ನಜ್ರಿಯಾ ಹೆಗಲ ಮೇಲೆ ಕೈ ಹಾಕಿಕೊಂಡು ಮೂವರು ನಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಹ್ಯಾಪಿ ಹ್ಯಾಪಿ ಬರ್ತ್‍ಡೇ ಟೂ ಮೈ ಡಿ.. ಲವ್ ಯೂ ಲಾಂಗ್ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇದಕ್ಕೆ ಮೇಘನಾ ರಾಜ್ ‘ಮೈ ಬೇಬಿ ಗರ್ಲ್, ಧನ್ಯವಾದ ಎಂದು ರಿಪ್ಲೈ ಕೊಟ್ಟಿದ್ದಾರೆ. ಸದ್ಯ ಈ ಫೋಟೋಗೆ ಪನ್ನಾಗಭರಣ ಸೇರಿದಂತೆ ಅನೇಕ ಮಂದಿ ರಿಯಾಕ್ಟ್ ಮಾಡಿದ್ದಾರೆ.
View this post on Instagram
ನಿನ್ನೆ ಮೇಘನಾ ರಾಜ್ ಜ್ಯೂನಿಯರ್ ಚಿರು ಅಪ್ಪನ ಫೋಟೋ ಜೊತೆ ಆಟ ಆಡುತ್ತಿರುವ ಕ್ಯೂಟ್ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
View this post on Instagram