ಮೇಘನಾ ಆಸೆಯಂತೆ ಹುಟ್ಟಿದ ತಕ್ಷಣ ಚಿರುಗೆ ಮಗು ತೋರ್ಸಿದ್ದೇವೆ: ಲಕ್ಷ್ಮಿ ಅಮ್ಮ

Public TV
1 Min Read
chiru sarja grand mother lakshmi amma

ಬೆಂಗಳೂರು: ತುಂಬಾ ಸಂತೋಷವಾಗುತ್ತಿದೆ. ನನ್ನ ಮಗನನ್ನೇ ನೋಡಿದಂತೆ ಆಯ್ತು. ಈ ತಿಂಗಳಲ್ಲಿ ಹುಟ್ಟಿರೋದು ಖುಷಿಕೊಟ್ಟಿದೆ. ಚಿರು, ಧ್ರುವ ಸಹ ಇದೇ ತಿಂಗಳಲ್ಲಿ ಹುಟ್ಟಿದ್ದಾರೆ. ಇದೀಗ ಚಿರು ಮಗು ಸಹ ಅಕ್ಟೋಬರ್ ತಿಂಗಳಲ್ಲೇ ಜನನವಾಗಿದೆ ಎಂದು ಚಿರು ಸರ್ಜಾ ಅಜ್ಜಿ ಲಕ್ಷ್ಮಿ ಅಮ್ಮ ತಮ್ಮ ಮರಿ ಮೊಮ್ಮಗನ ಕುರಿತು ಸಂತಸ ಹಂಚಿಕೊಂಡಿದ್ದಾರೆ.

dhruva saraja 2

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿರು, ಧ್ರುವ ಹುಟ್ಟಿದ ತಿಂಗಳಲ್ಲೇ ಮಗು ಜನಿಸಿರುವುದು ತುಂಬಾ ಸಂತಸವನ್ನುಂಟು ಮಾಡಿದೆ. ಚಿರುವನ್ನೇ ನೋಡಿದಂತೆ ಆಗುತ್ತದೆ ಎಂದು ಅಮ್ಮಾಜಿ ಮಗುವಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

dhruva saraja and prerana

ಮೇಘನಾ ಚಿಕ್ಕಮ್ಮನ ಮಗ ತೇಜ್ ಸಹ ಈ ಸಂತಸ ಸುದ್ದಿ ಕುರಿತು ಮಾತನಾಡಿದ್ದು, ಇದುವರೆಗೂ ಯಾರನ್ನೂ ಈ ರೀತಿ ಸ್ವಾಗತಿಸಿಲ್ಲ. ಅದೇ ರೀತಿ ನಮ್ಮ ಮನೆಗೆ ಜೂನಿಯರ್ ಚಿರು ಎಂಟ್ರಿ ಕೊಟ್ಟಿದ್ದಾನೆ. ನನ್ನ ತಂಗಿ ತುಂಬಾ ಖುಷಿಯಾಗಿದ್ದಾಳೆ. ಮಗು ತುಂಬಾ ಕ್ಯೂಟ್ ಆಗಿದೆ. ಕಿತ್ತೂರು ರಾಣಿ ಚೆನ್ನಮ್ಮನ ಧೈರ್ಯ ನನ್ನ ತಂಗಿಗಿದೆ. ಕಷ್ಟಗಳನ್ನು ಧೈರ್ಯವಾಗಿ ನಿಭಾಯಿಸಿದ್ದಾಳೆ ಎಂದು ಸಂತಸ ಹಂಚಿಕೊಂಡರು.

ಆಪರೇಷನ್ ಥಿಯೇಟರ್ ನಲ್ಲಿತ್ತು ಚಿರು ಫೋಟೋ
ಮಗು ಹುಟ್ಟಿದ ತಕ್ಷಣ ಅಪ್ಪನ ಫೋಟೋ ನೋಡಬೇಕು. ಮೊದಲು ಚಿರುಗೆ ಮಗುವನ್ನು ತೋರಿಸಬೇಕು ಎಂಬುದು ಮೇಘನಾ ಆಸೆ ಆಗಿತ್ತು. ಹೀಗಾಗಿ ಚಿರಂಜೀವಿ ಫೋಟೋವನ್ನು ಆಸ್ಪತ್ರೆಯ ಕೊಠಡಿಯಲ್ಲಿ ಇರಿಸಲಾಗಿತ್ತು. ಮೇಘನಾ ಆಸೆಯಂತೆ ಮಗು ಹುಟ್ಟಿದ ತಕ್ಷಣ ಚಿರು ಫೋಟೋಗೆ ತೋರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *