ಬೆಂಗಳೂರು: ಮೇಕೆದಾಟು, ಮಹಾದಾಯಿ ಯೋಜನೆ ಪ್ರಾರಂಭಿಸಿ ಪೂರ್ಣಗೊಳಿಸಬೇಕಿದೆ. ಕಾನೂನಿನ ಚೌಕಟ್ಟಿನಲ್ಲಿ ಪರಾವನಿಗೆ ಪಡೆದು ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
75ನೇ ಸ್ವಾತಂತ್ರ್ಯ ದಿನದಂದು ಮಾಣಿಕ್ ಷಾ ಪೆರೆಡ್ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಿದರು. ನಂತರ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೇಕೆದಾಟು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಆಗಿದ್ದು, ಶೀಘ್ರದಲ್ಲೇ ಕೇಂದ್ರದ ಜೊತೆ ಅನುಮತಿ ಪಡೆದ ಯೋಜನೆ ಆರಂಭಿಸುತ್ತೇವೆ ಎಂದು ತಿಳಿಸಿದರು.
ಸಿಎಂ ಭಾಷಣದ ಮುಖ್ಯಾಂಶಗಳು:
ಮೊದಲಿಗೆ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಭಾರತ ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ. ಪ್ರಜಾಪ್ರಭುತ್ವ ಬಹಳ ಆಳವಾಗಿ ನೆಲೆಯೂರಿದೆ ಡಾ.ಬಿ.ಆರ್ ಅಂಬೇಡ್ಕರ್ ಅವರ ದೂರದೃಷ್ಟಿ, ಸಮಾನತೆ ಹಾಗೂ ಸಂವಿಧಾನ ನಮಗೆ ಭಗವದ್ಗೀತೆಯಾಗಿದೆ.
ಇಂದು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜನ್ಮ ದಿನವಾಗಿದ್ದು, ರಾಜ್ಯ ಸರ್ಕಾರದಿಂದ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯನ್ನು ಆಚರಿಸಲು ನಿರ್ಧಾರಿಸಲಾಗಿದೆ. ಸಂಗೊಳ್ಳಿ ರಾಯಣ್ಣನವರ ಬಲಿದಾನ ಮಹತ್ವವಾದದ್ದು, ಅವರನ್ನು ಯಾವಾಗಲೂ ನೆನಪಿಸಿಕೊಳ್ಳಬೇಕು ಎನ್ನುತ್ತಾ ಸ್ವಾತಂತ್ರ್ಯ ಸೇನಾನಿಗಳು ಮನೆ, ಮಠ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಸೇನಾನಿಗಳಿಗೆ ನನ್ನ ನಮನಗಳು.
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ವಿವಿಧ ವಲಯಗಳಿಗೆ 7,422 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 24 ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಬೆಡ್ 4 ಸಾವಿರಕ್ಕೂ ಹೆಚ್ಚು ವೆಂಟಿಲೇಟರ್ ಒದಗಿಸಲಾಗಿದೆ. ಇದುವರೆಗೆ ರಾಜ್ಯದಲ್ಲಿ 3.5 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಮೂರನೇ ಅಲೆ ಎದುರಿಸಲು ತಜ್ಞರ ಕಾರ್ಯಪಡೆಯ ಸಲಹೆ ಅನ್ವಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಯಡಿಯೂರಪ್ಪಗೆ ಈ ವೇದಿಕೆ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್ ನಿಯಂತ್ರಣಕ್ಕೆ ಅವರು ಕೈಗೊಂಡ ಕ್ರಮಗಳೇ ಇಂದು ಕೋವಿಡ್ ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣವಾಗಿದೆ. ಎರಡನೇ ಅಲೆ ನಿಯಂತ್ರಣದಲ್ಲಿದ್ದರೂ ಮೂರನೇ ಅಲೆಯ ಭೀತಿಯಲ್ಲಿದ್ದೇವೆ. ಸರ್ಕಾರ ಬಂದ ಕೂಡಲೇ ಕೋವಿಡ್‍ಗೆ ಹೆಚ್ಚಿನ ಮಹತ್ವ ಕೈಗೊಂಡಿದ್ದೇವೆ. ಕೇರಳ, ಮಹಾರಾಷ್ಟ ಗಡಿ ಜಿಲ್ಲೆಗಳನ್ನ ರಕ್ಷಿಸಬೇಕಿದೆ. ಈ ಬಗ್ಗೆ ನಾನೇ ಖುದ್ದು ತೆರಳಿ ಮೇಲ್ವಿಚಾರಣೆ ಮಾಡಿದ್ದೇನೆ. ಇದಕ್ಕೆ ಜನರು ಸಹ ಸಹಕಾರ ನೀಡಬೇಕು ಹಾಗೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು.
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ರಮಿಸಿದ ಅಭಿವೃದ್ಧಿ ಪಥದಲ್ಲಿಯೇ ಮುಂದುವರೆಯುವ ಸಂಕಲ್ಪ ಮಾಡಿದ್ದೇನೆ. ಇವತ್ತಿನಿಂದಲೇ ನವ ಕರ್ನಾಟಕ ನಿರ್ಮಾಣ ಕಾರ್ಯ ಆರಂಭ ಎಂದು ಘೋಷಣೆ ಮಾಡುತ್ತೇನೆ. ಹೊಸತಂತ್ರಜ್ಞಾನ, ಮಾನವಸಂಪನ್ಮೂಲ, ಕೃಷಿ, ಉತ್ಪಾದನ ಕೇಂದ್ರದಲ್ಲಿ ವೈಜ್ಞಾನಿಕ ಅಭಿವೃದ್ಧಿ ಸಾಗಿಸಲು ಪಣ ತೊಟ್ಟಿದ್ದೇನೆ. ರೈತರ ಬದುಕಿನಲ್ಲಿ ಕ್ರಾಂತಿ ತರುವ ಕೆಲಸ, ರೈತರ ಕೇಂದ್ರೀಕೃತವಾದ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡುತ್ತೇನೆ.
ಪ್ರವಾಹ ಸಂತಸ್ತರಿಗೆ ತಕ್ಷಣದ ಪರಿಹಾರ 10,000 ರೂ, ಅಲ್ಪ ಹಾನಿಯಾದ ಮನೆಗಳಿಗೆ 50 ಸಾವಿರ, ಭಾಗಶಃ ಹಾನಿಯಾದ ಮನೆಗಳಿಗೆ 3ಲಕ್ಷ ರೂ, ಪೂರ್ಣ ಹಾನಿ ಪ್ರಕೆಣಗಳಿಗೆ 5 ಲಕ್ಷ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ತಾಲೂಕು, ಸಬ್‍ರಿಜಿಸ್ಟರ್ ಆಫೀಸ್ ಗೆ ಜನ ಓಡಾಡುವುದನ್ನ ನಿಲ್ಲಿಸಬೇಕು. ಇದನ್ನೂ ಓದಿ:ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: ಶ್ರೀರಾಮುಲು
ಸರ್ಕಾರ ಬಂದ ಕೂಡಲೇ ಪ್ರವಾಹ ಬಂತು. ಅದಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ರೈತರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಟ್ಟಿದ್ದೇವೆ. ಕರ್ನಾಟಕ ಕೈಗಾರಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಹಲವು ಕಾರ್ಖನೆಗಳು ಬಂದು ಬುನಾದಿ ಹಾಕಿದವು. ಕರಾವಳಿಯ ಬ್ಯಾಂಕಿಂಗ್ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಕೈಗಾರಿಕೆಗೆ ಹೊಸ ನೀತಿ ಮಾಡಿದ್ದೇವೆ. ಅಲ್ಲದೇ ಕರ್ನಾಟಕ ಪೊಲೀಸ್ ಇಡೀ ದೇಶದಲ್ಲೇ ನಂಬರ್ 1 ಆಗಿದೆ. ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಯಶಸ್ವಿಯಾಗಿಸಿದೆ.
ಅಮೃತ ಗ್ರಾಮ ಪಂಚಾಯ್ತಿ ಯೋಜನೆ ಘೋಷಿಸಿದ್ದು, 750 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೊಳಿಸಲಿದ್ದು, ಆಯ್ದ 75 ನಗರಗಳಲ್ಲಿ 75 ಕೋಟಿ ವೆಚ್ಚದಲ್ಲಿ ಅಮೃತ ನಿರ್ಮಲ ನಗರ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರಿಗೆ ಪ್ರೋತ್ಸಹ ನೀಡಲು ಅಮೃತ ಪ್ರೋತ್ಸಾಹ ಕಿರು ಉದ್ಯಮವನ್ನು ಆರಂಭಿಸಲಾಗುತ್ತದೆ. ಇದನ್ನೂ ಓದಿ:54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ