ಲಕ್ನೋ: ಮೇಕೆಯ ಕಾಲಿಗೆ ಹೊಡೆದರೆಂಬ ಕಾರಣಕ್ಕಾಗಿ ಪಕ್ಕದ ಮನೆಯ ತಂದೆ ಮಗನನ್ನು ಗುಂಡಿಕ್ಕಿ ಕೊಂದ ಭಯಾನಕ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.
ಕೊಲೆಯದವರನ್ನು ಆಗ್ರಾದ ಭೀಕಮ್ ಸಿಂಗ್ ಮತ್ತು ಜೀತೆಂದ್ರ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಿರುವವಳನ್ನು ಆರೋಪಿ ಗಾಯನಿ ಎಂದು ಗುರುತಿಸಲಾಗಿದ್ದು, ಆಕೆ ಮನೆಯಲ್ಲಿದ್ದ ಪಿಸ್ತೂಲ್‍ನಿಂದ ಈ ಇಬ್ಬರನ್ನು ಸಣ್ಣ ಕಾರಣಕ್ಕಾಗಿ ಗುಂಡಿಕ್ಕಿಕೊಂದು ಪರಾರಿಯಾಗಿದ್ದಾಳೆ.
ಪುರಶಿವ ಲಾಲ್ ಪ್ರದೇಶದ ಸ್ಥಳೀಯರು ತಿಳಿಸಿದ ಪ್ರಕಾರ ಮೇಕೆಯೊಂದಕ್ಕೆ ಯಾರೋ ಹೊಡೆದು ಗಾಯಗೊಳಿಸಿದ್ದರು. ಮೇಕೆ ಭೀಕಮ್ ಸಿಂಗ್‍ನ ಮನೆಯ ಒಳಗೆ ಹೋಗಿತ್ತು. ಇದನ್ನು ಓಡಿಸಿದ್ದರು. ಇದರಿಂದ ಕೋಪಗೊಂಡ ಮೇಕೆಯ ಒಡತಿ ಗಾಯನಿ ಮನೆಯಲ್ಲಿದ್ದ ಪಿಸ್ತೂಲ್‍ನಿಂದ 20 ವರ್ಷ ಪ್ರಾಯದ ಜೀತೆಂದ್ರ ಮತ್ತು ಆತನ ತಂದೆ ಭೀಕಮ್ ಮೇಲೆ ಗುಂಡು ಹಾರಿಸಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಇಬ್ಬರು ಸಾವನ್ನಪ್ಪಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪರಾರಿಯಾಗಿರುವ ಕುರಿತು ತನಿಖೆ ನಡೆಸುತ್ತಿದ್ದಾರೆ.