ಕೋಲ್ಕತ್ತಾ: ಮೇಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡುತ್ತಿದ್ದ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.
This is how the elephant got tranquillised and rescued in an extremely challenging situation. Kudos WBFD and team. The most difficult part of such operations is the mob management. They go berserk after seeing wild animals in human habitations. #rescue https://t.co/6SSUWFnuiA pic.twitter.com/fFxMap2vkQ
— Ramesh Pandey (@rameshpandeyifs) February 26, 2021
Advertisement
ಪಶ್ಚಿಮ ಬಂಗಾಳದ ಮಿಡ್ನಾಪುರದ ಮೆಡಿಕಲ್ ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ರಾತ್ರಿ ಕಾಡಾನೆ ಆವರಣದ ತುಂಬಾ ಓಡಾಡಿದೆ. ವಿದ್ಯಾರ್ಥಿಗಳು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿಯನ್ನೂ ನೀಡಿದ್ದರು. ಈ ವಿಚಾರ ತಿಳಿದ ಹಲವರು ಆನೆಯನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಕೂಡಾ ಕಾಲೇಜು ಆವರಣದಲ್ಲಿ ಜಮಾಯಿಸಿದ್ದರು. ಆನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸದ್ಯ ಈ ಕಾರ್ಯಾಚರಣೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Advertisement
Wild elephant roaming around Midnapore Medical College Boys Hostel.#Midnapore #Westbengal@abpanandatv @ParveenKaswan @rameshpandeyifs pic.twitter.com/UkkmoSPq1I
— Parthasarathi Ghosh (@DearPSG) February 25, 2021
Advertisement
ಆನೆಯನ್ನು ಕ್ರೇನ್ ಮೂಲಕ ಟ್ರಕ್‍ಗೆ ತರುವ ದೃಶ್ಯವಿದೆ. ಹೀಗೆ ಅತ್ಯಂತ ಸುರಕ್ಷಿತವಾಗಿ ಆನೆಯನ್ನು ಹಿಡಿದ ಅರಣ್ಯ ಸಿಬ್ಬಂದಿ ಆನೆಯನ್ನು ಅರಣ್ಯಕ್ಕೆ ಕರೆತಂದಿದ್ದಾರೆ. ಇಲ್ಲಿ ಆನೆಗೆ ಸೂಕ್ತ ಆರೈಕೆ ಮಾಡಿ ಬಳಿಕ ಕಾಡಿಗೆ ಬಿಡಲು ನಿರ್ಧರಿಸಲಾಗಿದೆ ಎಂದು ಬರೆದು ಕೊಂಡು ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅರಣ್ಯ ಅಧಿಕಾರಿ ರಮೇಶ್ ಪಾಂಡೆ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
Tranquillising and rescuing an elephant in a city area is really difficult and challenging. The forest officials of Midnapore, WB did a good job. The monitoring of elephant is being done after releasing him back in jungle. @ParveenKaswan #rescue pic.twitter.com/nWutKJtNdl
— Ramesh Pandey (@rameshpandeyifs) February 26, 2021
ನಗರ ಪ್ರದೇಶಗಳಲ್ಲಿ ಆನೆಗಳನ್ನು ರಕ್ಷಿಸುವುದು ನಿಜವಾಗಿಯೂ ಕಷ್ಟ ಮತ್ತು ಸವಾಲಿನ ಕೆಲಸ. ಪಶ್ಚಿಮ ಬಂಗಾಳದ ಮಿಡ್ನಾಪುರದ ಅರಣ್ಯ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಆನೆಯನ್ನು ಮರಳಿ ಕಾಡಿಗೆ ಬಿಡುಗಡೆ ಮಾಡಿದ ನಂತರ ಅದರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ರಮೇಶ್ ಪಾಂಡೆ ಹೇಳಿದ್ದಾರೆ.