ಹಾವೇರಿ: ಮೃತ ತಂದೆಯ ಮಾಡುವ ಮೂಲಕವಾಗಿ ಕುಟುಂಬದ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮರೆದಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ.
ರಾಣೇಬೆನ್ನೂರು ನಗರದ ಶಬರಿ ಕಾಲೋನಿಯ ನಿವಾಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಯಮ ನಿವೃತ್ತ ಚಾಲಕ ಶಿವಾನಂದ ಯಮ್ಮಿ(62) ಅವರ ಕಣ್ಣುಗಳನ್ನು ದಾನಮಾಡಲಾಗಿದೆ.
ಶಿವಾನಂದ ಯಮ್ಮಿ ಅವರು ವಯೋಸಹಜವಾಗಿ ನಿಧನಹೊಂದಿದ್ದರು. ಯಮ್ಮಿ ಮಕ್ಕಳು ತಂದೆಯ ಎರಡು ಕಣ್ಣುಗಳನ್ನ ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ದಾನಮಾಡಿದರು. ನೇತ್ರದಾನ ಮಾಡುವ ಮೂಲಕ ಎರಡು ಜೀವನಕ್ಕೆ ಬೆಳಕು ನೀಡಿದ್ದಾರೆ.
ಅಕ್ಕಿ ಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಕಾರದೊಂದಿಗೆ ರಾಣೆಬೆನ್ನೂರಿನ ಡಾ. ಚಂದ್ರಶೇಖರ ಕೆಲಗಾರ ನೇತ್ರತ್ವದಲ್ಲಿ ನೇತ್ರಗಳನ್ನು ಸಂಗ್ರಹಿಸಲಾಯಿತು. ರಾಣೇಬೆನ್ನೂರು ನಗರದ ಜನತೆ ಹಾಗೂ ಅಪಾರ ಬಂದುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.