ಲಕ್ನೋ: ತರಕಾರಿ ಮಾರುವ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಮನೆಗೆ ಸಾಗಿಸಲು ಆಟೋ ಚಾಲಕನೋರ್ವ 4,500ರೂ ನೀಡುವಂತೆ ಬೇಡಿಕೆ ಇಟ್ಟಿರುವ ಶೋಚನೀಯ ಘಟನೆ ಗೋರಕಪುರದಲ್ಲಿ ನಡೆದಿದೆ.
ಈ ವಿಚಾರವಾಗಿ ಮೃತ ವ್ಯಕ್ತಿಯ ಸಂಬಂಧಿಕರು ರಾಜು ಎಂಬ ಆಟೋ ಚಾಲಕನ ವಿರುದ್ಧ ಆರೋಪಿಸಿ ಸಿಎಂ ಯೋಗಿ ಆದಿತ್ಯಾನಾಥ್‍ರವರಿಗೆ ದೂರು ನೀಡಿದ್ದಾರೆ.
ಶನಿವಾರ ಸಂಜೆ ಕಮಲೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಈ ವಿಷಯ ತಿಳಿಯುತ್ತಿದ್ದಂತೆ ಕಮಲೇಶ್ ಸಹೋದರ ಭೋಲಾ ಬಿಆರ್‍ಡಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ತಲುಪಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಮಲೇಶ್ ಶನಿವಾರ ಸಂಜೆ 5 ಗಂಟೆಗೆ ಮೃತಪಟ್ಟಿದ್ದಾರೆ.
ಬಳಿಕ ಶವವನ್ನು ಶವಗಾರದಲ್ಲಿ ಇಡಲಾಯಿತು. ಈ ವೇಳೆ ಸ್ಥಳಕ್ಕೆ ಸಹೋದರ ಭೋಲಾ ಶವಗಾರಕ್ಕೆ ತಲುಪಿದರು. ಕಮಲೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಮನೆಗೆ ಸಾಗಿಸಲು ಆಟೋ ಚಾಲಕ 3,500 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ 1,000 ರೂ. ಪಾಲಿಥಿನ್ ಕಟ್ಟುವಂತೆ ತಿಳಿಸಲಾಗಿದೆ.
ಸದ್ಯ ಆಟೋ ಚಾಲಕನ ವಿರುದ್ಧ ಮೃತನ ಪತ್ನಿ ಕಿರಣ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರವರಿಗೆ ಪತ್ರ ಬರೆಯುವ ಮೂಲಕ ದೂರು ನೀಡಿದ್ದು, ಘಟನೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.