– ಯುವಕನಂತೆ ಕಾಣಲು ವಿಗ್ ಧರಿಸ್ತಿದ್ದ
– ಸೆ.3 ರಂದು ಅಪ್ರಾಪ್ತೆಯ ಕಿಡ್ನಾಪ್
ಮೀರತ್: ಕಳೆದ ಸೆಪ್ಟೆಂಬರ್ 3ರಂದು ಮೀರತ್‍ನಿಂದ ಅಪಹರಣಕ್ಕೊಳಗಾದ ಅಪ್ರಾಪ್ತೆ ಚೇತರಿಸಿಕೊಂಡ ಬಳಿಕ ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮೀರತ್ನ ಕಂಕರ್‍ಖೇಡಾ ಪ್ರದೇಶದಿಂದ ಅಪಹರಿಸಲ್ಪಟ್ಟ ಬಾಲಕಿಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಹಿಂದೂ ಹುಡುಗಿಯನ್ನು ಆಮಿಷವೊಡ್ಡಿ ತನ್ನ ಬೆಲೆಗೆ ಬೀಳಿಸಿಕೊಳ್ಳಲು ತನ್ನ ಹೆಸರನ್ನು ‘ಅಮನ್’ ಎಂದು ಹೇಳುತ್ತಿದ್ದ ಅಬ್ದುಲ್ಲಾ(42) ಎಂಬಾತನನ್ನು ಬಂಧಿಸಿದ್ದಾರೆ.
ತನಗೆ ಮೂವರು ಹೆಂಡತಿಯರು ಹಾಗೂ ನಾಲ್ವರು ಮಕ್ಕಳಿದ್ದಾರೆ ಎಂದು ಅಬ್ದುಲ್ಲಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಈತ ಫೇಸ್‍ಬುಕ್ ನಲ್ಲಿ ಅಮನ್ ಎಂಬ ಹೆಸರಿನಲ್ಲಿ ಖಾತೆ ತೆರದು ಅದರಲ್ಲಿ ವಿಗ್ ಧರಿಸಿರುವ ಫೋಟೋಗಳನ್ನು ಫೋಸ್ಟ್ ಮಾಡುತ್ತಾನೆ. ಈ ಮೂಲಕ ತಾನು ಇನ್ನೂ ಯುವಕ ಎಂಬುದನ್ನು ತೋರಿಸಿಕೊಳ್ಳುತ್ತಿದ್ದನು. ಈತ ಅಪ್ರಾಪ್ತೆಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಆಕೆಯನ್ನು ಕೂಡ ಮದುವೆಯಾಗುವ ಯೋಜನೆ ಹಾಕಿದ್ದನು.
ಸೆಪ್ಟೆಂಬರ್ 3ರಂದು ಬಾಲಕಿ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು ಎಂದು ಮೀರತ್ ಎಸ್‍ಪಿ ಅಖಿಲೇಶ್ ನರೈನ್ ತಿಳಿಸಿದ್ದಾರೆ. ಇತ್ತ ಬಾಲಕಿಯ ಪೋಷಕರು ದೂರು ನೀಡಿದ ಬಳಿಕ ಆಕೆಯ ಪತ್ತೆಗೆ ಹಲವಾರು ತಂಡಗಳನ್ನು ರಚಿಸಿದ್ದೆವು. ಈ ವೇಳೆ ವ್ಯಕ್ತಿಯನ್ನು ಬಂಧಿಸಿ ಬಾಲಕಿಯನ್ನು ಆತನ ಬಳಿಯಿಂದ ರಕ್ಷಣೆ ಮಾಡಿದ್ದೇವೆ. ಆರೋಪಿಯನ್ನು ಬುಧವಾರ ನ್ಯಾಯಾಲಕ್ಕೆ ಹಾಜರುಪಡಿಸಿ ಜೈಲಿಗಟ್ಟಲಾಗಿದೆ.
ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಎಸ್‍ಪಿ ಹೇಳಿದ್ದಾರೆ.
उत्तरप्रदेश के मेरठ में अब्दुल्ला की 4 बीवियां और 4 बच्चे… फिर भी अमन चौधरी बनकर दूसरे सम्प्रदाय की 17 साल की लड़की को प्रेमजाल में फंसाकर बलात्कार किया..
पुलिस ने आरोपी को पकड़ा तो एक और खुलासा हुआ, सिर पर लगे बाल भी नकली मिले। #UttarPradesh #Meerut @Manasnews24 pic.twitter.com/1nyJaSIpqE
— News24 (@news24tvchannel) September 16, 2020