– ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ
ಲಕ್ನೋ: ಮನೆಯಲ್ಲಿ ಮಲಗಿದ್ದ ಮೂವರು ಅಪ್ರಾಪ್ತ ಸೋದರಿಯರ ಎರಚಿದ್ದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗಾಯಾಳು ಆರೋಪಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಕ್ಟೋಬರ್ 12ರ ರಾತ್ರಿ ಸೋದರಿಯರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದರು.
Advertisement
ಮಂಗಳವಾರ ರಾತ್ರಿ ಆರೋಪಿ ಆಶೀಷ್ ಇರೋ ಸ್ಥಳದ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಆರೋಪಿ ಆಶೀಷ್ ಬೈಕ್ ಮೂಲಕ ಕರನೈಲಗಂಡ್ ಹುಜುರಪುರ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಮಲಗಿದ್ದ ಮೂವರು ದಲಿತ ಸೋದರಿಯರ ಮೇಲೆ ಆ್ಯಸಿಡ್ ದಾಳಿ– ಉತ್ತರಪ್ರದೇಶದಲ್ಲಿ ಮತ್ತೊಂದು ಭಯಾನಕ ಕೃತ್ಯ
Advertisement
Advertisement
ಆರೋಪಿಯನ್ನ ಹಿಂಬಾಲಿಸಿದ ಪೊಲೀಸರು ಆತನನ್ನ ತಡೆದು, ಶರಣಾಗುವಂತೆ ಹೇಳಿದ್ದಾರೆ. ಆದ್ರೆ ಆಶೀಷ್ ಪೊಲೀಸರಿಗೆ ಶರಣಾಗದೇ ಗುಂಡು ಹಾರಿಸಿದ್ದಾರೆ. ಇತ್ತ ಪೊಲೀಸರು ಸಹ ಆರೋಪಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರೇಪ್ ಆ್ಯಂಡ್ ಮರ್ಡರ್-ಬಾಲಕಿಯ ಕಣ್ಣು ಕಿತ್ತಿ, ನಾಲಿಗೆ ಕತ್ತರಿಸಿ, ಕತ್ತು ಹಿಸುಕಿ ಬರ್ಬರ ಕೊಲೆ
Advertisement
ಗೋಂಡಾದ ಎಸ್‍ಪಿ ಶೈಲೇಶ್ ಕುಮಾರ್ ಪಾಂಡೆ, ಮೂವರು ಸೋದರಿಯ ಮೇಲೆ ಕೆಮಿಕಲ್ ದಾಳಿ ನಡೆದಿದೆ. ಅಪ್ರಾಪ್ತೆಯರ ಮೇಲೆ ಮೇಲೆ ಹಾಕಲಾದ ಕೆಮಿಕಲ್ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿ ವಿಜ್ಞಾನ ತಂಡ ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕಲಾಗುತ್ತಿದೆ. ಕೆಮಿಕಲ್ ದಾಳಿಗೊಳಗಾದ ಮೂವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಓರ್ವ ಬಾಲಕಿಯ ದೇಹದ ಶೇ.5 ರಿಂದ 7 ರಷ್ಟು ಸುಟ್ಟಿದೆ. ಈ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಲಕಿಯರಿಗೆ ಪರಿಚಯಸ್ಥನೇ ದಾಳಿ ನಡೆಸಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಹತ್ರಾಸ್ ಕೇಸ್ – ಸಂಚಲನ ಸೃಷ್ಟಿಸಿದ್ದ ವೆಬ್‌ಸೈಟ್ ದಿಢೀರ್ ಬಂದ್
ನಮಗೆ ಪೊಲೀಸರ ತನಿಖೆ ಮೇಲೆ ನಂಬಿಕೆ ಇಲ್ಲ. ದಾಳಿ ಹೇಗೆ ಮತ್ತು ಯಾರಿಂದ ನಡೆಯಿತು ಎಂಬುದರ ಬಗ್ಗೆ ಗೊತ್ತಿಲ್ಲ. ನಮಗೆ ಯಾರ ಜೊತೆ ವೈರತ್ವ ಇಲ್ಲ. ಘಟನೆ ನಡೆದರೂ ಇಷ್ಟು ಸಮಯವಾದ್ರೂ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿಲ್ಲ ಎಂದು ಬಾಲಕಿಯ ತಂದೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು. ಇದನ್ನೂ ಓದಿ: ಹತ್ರಾಸ್‍ನಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ