– ಹೊಲಕ್ಕೆ ಕರೆದೊಯ್ದು ಮನಸೋ ಇಚ್ಛೆ ಅತ್ಯಾಚಾರ
– ದೂರು ದಾಖಲಿಸಿಕೊಳ್ಳದ ಪೊಲೀಸರು
ಚಂಡೀಗಡ: ಮೂವರು ಕಾಮುಕರು ರಾಕ್ಷಸಿ ರೀತಿಯಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಒಬ್ಬರಾದ ಮೇಲೊಬ್ಬರಂತೆ ಸುಮಾರು 28 ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ.
ಹರಿಯಾಣದ ನುಹ್ ಜಿಲ್ಲೆಯ ಪಿನಂಗ್ವಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೂವರು ಕಾಮುಕರು ವಿಕೃತವಾಗಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. 28 ಗಂಟೆಗಳ ಕಾಲ ನಿರಂತರವಾಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದು, ನಿರ್ಜನ ಪ್ರದೇಶವಾದ ರಾಗಿ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
Advertisement
Advertisement
ಘಟನೆ ನಡೆಯುತ್ತಿದ್ದಂತೆ ಕುಟುಂಬಸ್ಥರು ದೂರು ನೀಡಲು ಮುಂದಾಗಿದ್ದು, ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ನಡೆಸಿದ ಮೇಲೆ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕಿ ಆರೋಪಿಗಳನ್ನು ಇಸ್ಮಾಯಿಲ್, ಇರ್ಶಾದ್ ಹಾಗೂ ಸಾಹಿರ್ ಎಂದು ಗುರುತಿಸಿದ್ದಾಳೆ.
Advertisement
ಬಹಿರ್ದೆಸೆಗೆ ತೆರಳಿದಾಗ ಇಸ್ಮಾಯಿಲ್ ಆಮಿಷ ತೋರಿಸಿ 15 ವರ್ಷದ ಬಾಲಕಿಯನ್ನು ರಾಗಿ ಹೊಲಕ್ಕೆ ಕರೆದೊಯ್ದಿದ್ದಾನೆ. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡು ಗಂಟೆಯ ನಂತರ ಇಸ್ಮಾಯಿಲ್ ಸಾಹಿರ್‍ನನ್ನು ಸ್ಥಳಕ್ಕೆ ಕರೆದಿದ್ದು, ಈತನೂ ಸಹ ಅತ್ಯಾಚಾರ ಎಸಗಿದ. ಇಷ್ಟಾದರೂ ಕಾಮುಕರು ಸುಮ್ಮನಾಗಲಿಲ್ಲ. ಕೆಲ ಹೊತ್ತಿನ ಬಳಿಕ ಆರೋಪಿಗಳು ಮತ್ತೊಬ್ಬ ಕಾಮುಕ ಇರ್ಶಾದ್ ನನ್ನು ಕರೆದಿದ್ದು, ಈತನೂ ಬಲತ್ಕಾರ ಮಾಡಿದ ಎಂದು ವಿವರಿಸಿದ್ದಾಳೆ.
Advertisement
ಇಷ್ಟಕ್ಕೆ ಸುಮ್ಮನಾಗದ ಕ್ರೂರಿಗಳು ಜ್ಯೂಸ್‍ನಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಿ ಕುಡಿಸಿದ್ದು, ಬಾಲಕಿಗೆ ಪ್ರಜ್ಞೆ ತಪ್ಪಿದ ಬಳಿಕ ಇಡೀ ದಿನ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಕಾಮುಕರು ವಿಚಾರಣೆ ವೇಳೆ ಹೇಳಿದ್ದಾರೆ.
ಈ ಘೋರ ಅಪರಾಧವನ್ನು ಯಾರಿಗೂ ಹೇಳಕೂಡದು. ಒಂದು ವೇಳೆ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನನ್ನನ್ನು ಕಳುಹಿಸಿದರು. ಶನಿವಾರ ಬೆಳಗ್ಗೆ 8ಕ್ಕೆ ಬಾಲಕಿ ಮನೆ ತಲುಪಿದ್ದು, ಘಟನೆ ಕುರಿತು ಕುಟುಂಬಸ್ಥರಿಗೆ ವಿವರಿಸಿದ್ದಾಳೆ ಎಂದು ವರದಿಯಾಗಿದೆ.
ಬಾಲಕಿ ಈ ಕುರಿತು ಹೇಳುತ್ತಿದ್ದಂತೆ ಕುಟುಂಬಸ್ಥರು ಪಿನಂಗ್ವಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ ಈ ವೇಳೆ ಪೊಲೀಸರು ಇದು ಒಪ್ಪಿತ ಘಟನೆ ಎಂದು ಹೇಳಿದ್ದಾರೆ. ಮೂವರು ಆರೋಪಿಗಳ ಹೆಸರಿನೊಂದಿಗೆ ನಾವು ದೂರು ದಾಖಲಿಸಿದ್ದೇವೆ. ಆದರೂ ನಾವು ಸುಳ್ಳು ಹೇಳುತ್ತಿದ್ದೇವೆ. ಇದು ಹುಡುಗಿಯರು ಹುಡುಗರನ್ನು ಬಲೆಗೆ ಬೀಳಿಸುವ ತಂತ್ರ ಎಂದು ಪೊಲೀಸರು ಹೇಳಿದರು ಎಂದು ಬಾಲಕಿ ತಂದೆ ವಿವರಿಸಿದ್ದಾರೆ.
ಈ ಕುರಿತು ತಿಳಿಯುತ್ತಿದ್ದಂತೆ ಗ್ರಾಮಸ್ಥರು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಂತರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ(ಸಾಮೂಹಿಕ ಅತ್ಯಾಚಾರ), 366ಎ(ಅಪ್ರಾಪ್ತೆ ಕೂಡಿ ಹಾಕಿರುವುದು), 363(ಅಪಹರಣ), 506(ಅಪರಾಧ ಬೆದರಿಕೆ) ಹಾಗೂ ಪೊಕ್ಸೊ ಕಾಯ್ದೆಯ ಸೆಕ್ಷನ್ 6 ಅಡಿ ಪ್ರಕರಣ ದಾಖಲಿಸಿದ್ದಾರೆ.
ಇಷ್ಟೆಲ್ಲ ನಡೆದಿದ್ದರೂ ಪಿನಂಗ್ವಾ ಪೊಲೀಸ್ ಠಾಣೆಯ ಎಸ್‍ಎಚ್‍ಒ ಬಾಲಕಿಯ ಕುಟುಂಬಸ್ಥರ ಆರೋಪವನ್ನು ತಳ್ಳಿ ಹಾಕಿದ್ದು, ಘಟನೆಯೂ ಒಪ್ಪಿತವಾಗಿ ನಡೆದಿದೆ. ಬಾಲಕಿಯು ಸ್ವ ಇಚ್ಛೆಯಿಂದ ಪುರುಷನೊಂದಿಗೆ ಹೋಗಿದ್ದಳು. ಅಲ್ಲದೆ ಬಾಲಕಿಯ ವಯಸ್ಸು 15 ಅಲ್ಲ ಅವಳಿಗೆ 17ರ ಮೇಲಿದೆ ಎಂದು ಹೇಳಿದ್ದಾರೆ.