– ಆಶ್ರಯ ಮನೆಗೆ ಕುಟುಂಬ ಸ್ಥಳಾಂತರ
– ಚಿಕಿತ್ಸಾ ವೆಚ್ಚ ಭರಿಸುವುದಾಗಿ ರಾಜ್ಯ ಸರ್ಕಾರ ಭರವಸೆ
ತಿರುವನಂತಪುರ: ಮಕ್ಕಳ ಚಿಕಿತ್ಸೆಗಾಗಿ ಬಡ ತಾಯಿಯೊಬ್ಬಳು ತನ್ನ ಅಂಗಾಂಗವನ್ನೇ ಮಾರಾಟಕ್ಕಿಟ್ಟ ಮನಕಲಕುವ ಗಟನೆಯೊಂದು ಕೇರಳದಲ್ಲಿ ನಡೆದಿದೆ.
Advertisement
ಶಾಂತಿ(44) ವರ್ಷದ ಮಹಿಳೆ ತನ್ನ ಐವರು ಮಕ್ಕಳೊಂದಿಗೆ ಕೊಚ್ಚಿಯಲ್ಲಿ ನೆಲೆಸಿದ್ದಾರೆ. ಈಕೆ ತನ್ನ ಮನೆಯ ಮುಂದೆ ಬೋರ್ಡ್ ಒಂದನ್ನು ಹಾಕಿದ್ದು, ಅದರಲ್ಲಿ ‘ತಾಯಿಯ ದೇಹದ ಅಂಗಾಗಳು ಮಾರಾಟಕ್ಕಿದೆ’ ಎಂದು ಬರೆದಿದ್ದಾರೆ. ಅಲ್ಲದೆ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಕೂಡ ಉಲ್ಲೇಖಿಸಿದ್ದಾರೆ.
Advertisement
Advertisement
ವಿಶೇಷವೆಂದರೆ ಕುಟುಂಬದ ಬಂಡಿ ಸಾಗುಸುತ್ತಿದ್ದ ಹಿರಿಯ ಮಗ ಕಳೆದ ವರ್ಷ ಜುಲೈನಲ್ಲಿ ಅಪಘಾತಕ್ಕೀಡಾಗಿದ್ದು, ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನು. ಇನ್ನು ಎರಡನೇಯ ಮಗ ಹುಟ್ಟಿದಾಗಿನಿಂದ ಮಾನಸಿಕ ಅಸ್ವಸ್ಥನಾಗಿದ್ದರೆ, 11 ವರ್ಷದ ಮಗಳು ಸಹ ರಸ್ತೆ ಅಪಘಾತದಿಂದಾಗಿ ನರದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಮಧ್ಯೆ ಕೊರೊನಾ ವೈರಸ್ ನಿಂದಾಗಿ ಮೂರನೇ ಮಗ ಕೂಡ ಕೆಲಸ ಕಳೆದುಕೊಂಡಿದ್ದಾನೆ. ಇನ್ನೊಂದು ಮಗು ಶಾಲೆಗೆ ಹೋಗುತ್ತಿದೆ. ಹೀಗಾಗಿ ಬದುಕಿನ ಬಂಡಿ ಸಾಗಿಸಲು ಬಡ ತಾಯಿ ಸಾಧ್ಯವಾಗದೆ ಕಣ್ಣೀರು ಹಾಕುತ್ತಿದ್ದು, ತನ್ನ ದೇಹದ ಅಂಗಾಂಗವನ್ನೇ ಮಾರಲು ನಿರ್ಧರಿಸಿದ್ದಾರೆ.
Advertisement
ಈ ಸಂಬಂಧ ಮಧ್ಯಮಕ್ಕೆ ಪ್ರತಿಕ್ರಿಯಿಸಿರುವ ಶಾಂತಿ, ನಾವು ಹಲವು ದಿನಗಳಿಂದ ಇಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಸದ್ಯ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದ್ದೇವೆ. ನನ್ನ ಮೂವರು ಮಕ್ಕಳ ಆರೋಗ್ಯದಲ್ಲಿ ತೊಂದರೆಗಳಿದ್ದು, ಕೆಲಸ ಮಾಡಲು ಆಗುತ್ತಿಲ್ಲ. ಈ ಮಧ್ಯೆ ಸುಮಾರು 20 ಲಕ್ಷ ರೂ. ನಷ್ಟು ಸಾಲ ಇದ್ದು, ಅದನ್ನು ಹಿಂದಿರುಗಿಸಲು ಸಹಾಯ ಹಸ್ತ ಚಾಚಿದ್ದೇವೆ. ನಮಗೆ ಹಣದ ಮೂಲ ಯಾವುದೂ ಇಲ್ಲ. ಹೀಗಾಗಿ ಜೀವನ ನಡೆಸಲು ಕಷ್ಟವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ತನ್ನ ಕಿರಿಯ ಮಗನನ್ನು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪತಿ ಬಿಟ್ಟು ಹೋಗಿದ್ದಾರೆ. ಮೊದಲು ನಾನು ಡ್ರೈವಿಂಗ್ ಶಿಕ್ಷಕಿಯಾಗಿ ಕೆಲ ಮಾಡುತ್ತಿದ್ದೆ. ಆದರೆ ಕ್ರಮೇಣ ಒಬ್ಬೊಬ್ಬರಾಗಿ ನನ್ನ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಡುತ್ತಾ ಬಂತು. ಹೀಗಾಗಿ ಮಕ್ಕಳನ್ನು ನೋಡಿಕೊಳ್ಳುವ ದೃಷ್ಟಿಯಿಂದ ನಾನು ಕೆಲಸ ಬಿಟ್ಟೆ ಎಂದು ಶಾಂತಿ ಅಲವತ್ತುಕೊಂಡಿದ್ದಾರೆ.
ಈ ವಿಚಾರ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಕುಟುಂಬವನ್ನು ಆಶ್ರಯ ಮನೆಯೊಂದಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಅಲ್ಲಿನ ರಾಜ್ಯ ಸರ್ಕಾರ ಭರವಸೆ ನೀಡಿದೆ. ಮಕ್ಕಳ ಆರೋಗ್ಯಕ್ಕಾಗಿ ಚಿಕಿತ್ಸೆಗೆ ಬೇಕಾದ ಖರ್ಚನ್ನು ಸರ್ಕಾರ ಪರಿಶೀಲಿಸುತ್ತದೆ ಎಂದು ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ತಿಳಿಸಿದ್ದಾರೆ.