ಮುಂಬೈ: ಮೂವರು ನೈಜಿರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ (ಡ್ರಗ್ಸ್)ನ್ನು ಪೊಲೀಸರು ವಶಪಡಿಸಿಕೊಂಡು ಅವರನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಕೊಕೇನ್ ಸಾಗಾಟ ಮಾಡುತ್ತಿದ್ದ ಮೂವರು ನೈಜೀರಿಯಾ ಮೂಲದ ವ್ಯಕ್ತಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬೈನ ಬಂಗೂರ್ ಪೊಲೀಸ್ ವಲಯದ ವಿಶೇಷ ಆಯುಕ್ತರು ಈ ಮೂವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಇವರಿಂದ ಕಳೆದ 24 ಗಂಟೆಗಳಲ್ಲಿ 22 ಲಕ್ಷ ರೂ.ಗಳ ಮೌಲ್ಯದ ಸುಮಾರು 220 ಗ್ರಾಂ ಕೊಕೇನ್‍ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಚೆ ಜೇಮ್ಸ್ (38) ಮಲಾಡ್‍ದ ಲಿಂಕ್ ರಸ್ತೆಯಲ್ಲಿ ಮಾದಕವಸ್ತುಗಳನ್ನು ತಲುಪಿಸಲು ಬರುತ್ತಿದ್ದಾನೆ ಎಂದು ಮೊದಲೇ ನಮಗೆ ಮಾಹಿತಿ ಸಿಕ್ಕಿತ್ತು. ನಾವು ಸ್ಥಳಕ್ಕೆ ಹೋದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಜೇಮ್ಸ್ ನೀಡಿದ ಮಾಹಿತಿಯ ಆಧಾರದ ಮೇಲೆ ಇತರ ಇಬ್ಬರು ಆರೋಪಿಗಳಾದ ಎಮೆಕಾ ಸಿಪ್ರಿಯನ್ ಮತ್ತು ಚುಕ್ವು ಜೋಸೆಫ್‍ನನ್ನು ಗೋರೆಗಾಂವ್‍ನ ಕಾಲೋನಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‍ಡಿಪಿಎಸ್) ಕಾಯ್ದೆಯ ಅಡಿಯಲ್ಲಿ ಈ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮೂವರಲ್ಲಿ 22 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ 200 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದೇವೆ. ಈ ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.