ಶಿವಮೊಗ್ಗ: ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 35 ಕೆಜಿಯ 20 ಅಡಿಕೆ ಚೀಲವನ್ನು ಕಳವು ಮಾಡಿದ ಮೂವರು ಆರೋಪಿಗಳನ್ನು ಜಿಲ್ಲೆಯ ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾದಪೀರ್(29), ಸಾದತ್ ಕಾಲೋನಿಯ ಸಲೀಂ (43), ಮತ್ತು ಷಫೀವುಲ್ಲಾ(32) ಬಂಧಿತರಾಗಿದ್ದಾರೆ. ಇವರು ಭದ್ರಾವತಿ ನೆಹರೂ ನಗರದ ನಿವಾಸಿಗಳಾಗಿದ್ದಾರೆ. ಅಡಿಕೆ ಕಳವು ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಕನ್ನಂಬಾಡಿ ಅಣೆಕಟ್ಟು ಸುತ್ತ ಕಲ್ಲು ಗಣಿಗಾರಿಕೆ ಸಂಪೂರ್ಣ ಸ್ಥಗಿತಕ್ಕೆ ತೀರ್ಮಾನ: ಡಾ. ನಾರಾಯಣಗೌಡ
ಭದ್ರಾವತಿ ಸಾದತ್ ಕಾಲೋನಿಯ ನೆಹರು ನಗರದ ಮುಖ್ಯರಸ್ತೆಯಲ್ಲಿದ್ದ ಜಾವೀದ್ ಎಂಬುವರಿಗೆ ಸೇರಿದ ಅಡಿಕೆ ಕಳವು ಮಾಡಲಾಗಿತ್ತು. ಗೋದಾಮಿನಲ್ಲಿ ಜು.6 ರಂದು ರಾತ್ರಿ ಸಮಯದಲ್ಲಿ ಶೇಖರಿಸಿಟ್ಟಿದ್ದ ತಲಾ 35 ಕೆಜಿಯ ಒಟ್ಟು 20 ಚೀಲ ಅಡಿಕೆ ಚೀಲಗಳನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಭದ್ರಾವತಿ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹಿಂದೂ ಯುವತಿಯ ಮದುವೆ ಮಾಡಿದ ಉಳ್ಳಾಲದ ಮುಸ್ಲಿಂ ಕುಟುಂಬ
ತನಿಖೆ ನಡೆಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳಿಂದ 1,29,500 ರೂಪಾಯಿ ಮೌಲ್ಯದ 700 ಕೆಜಿ ಅಡಿಕೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಾಳಿಯ ಗುಣಮಟ್ಟ ಹೆಚ್ಚಿಸಲು 6 ವಾಹನ ಖರೀದಿಗೆ ಮುಂದಾದ ಬಿಬಿಎಂಪಿ