– ಪಕ್ಷದ ಬಗ್ಗೆ ಮಾತನಾಡುವುದಕ್ಕೆ ಸಿದ್ದರಾಮಯ್ಯಗೆ ನೈತಿಕ ಹಕ್ಕಿಲ್ಲ
ಬೆಂಗಳೂರು: ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ಆಯ್ಕೆ ಮಾಡುತ್ತಾರೆ. ಎರಡು ಮೂರು ದಿನಗಳಲ್ಲಿ ಎಲ್ಲವೂ ಅಂತಿಮ ಆಗಲಿದೆ ಎಂದು ಬಸವರಾಜ ಬೊಮ್ಮಯಿ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲ ಮತ್ತು ಚರ್ಚೆ ಆರಂಭವಾಗಿದೆ. ಈ ನಡುವೆ ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಾಲಿ ಗೃಹ ಸಚಿವ ಬಸವರಾಜ ಬೊಮ್ಮಯಿ ಸಹ ಕೇಳಿ ಬಂದಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಕೋರ್ ಕಮಿಟಿ, ಪಾರ್ಲಿಮೆಂಟರಿ ಬೋರ್ಡ್‍ನಲ್ಲಿ ಸಭೆ ನಡೆಯುತ್ತಿದೆ. ಸಿಎಂ ಆಯ್ಕೆ ಸಂಬಂಧ ದೆಹಲಿಯಲ್ಲಿ ಸರಣಿ ಮೀಟಿಂಗ್ ನಡೀತಾ ಇವೆ. ಇನ್ನೂ ಎರಡು ಮೂರು ದಿನಗಳಲ್ಲಿ ಎಲ್ಲವೂ ಅಂತಿಮ ಆಗಲಿದೆ. ನನ್ನ ಹೆಸರೂ ಸಹ ಮಾಧ್ಯಮಗಳಲ್ಲಿ ಬರುತ್ತಿದೆ. ಹೈಕಮಾಂಡ್ ಸಭೆಯಲ್ಲಿ ಯಾವ ಆಯಾಮದಲ್ಲಿ ಚರ್ಚೆ ಆಗಿದೆ ಎಂಬ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ.ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆ ಸಂಕಲ್ಪ ಮಾಡಿದ್ರು: ಬಿ.ವೈ.ರಾಘವೇಂದ್ರ
ಇವತ್ತು ಧರ್ಮೇಂದ್ರ ಪ್ರಧಾನ್ ಬರ್ತಾ ಇದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಬರುವ ಸಾಧ್ಯತೆ ಇದೆ. ಆದಷ್ಟು ಬೇಗ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮುಂದಿನ ಮೂರ್ನಾಲ್ಕು ದಿನದಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ. ಶಾಸಕಾಂಗ ಕಮಿಟಿ, ಕೋರ್ ಕಮಿಟಿ, ಪಾರ್ಲಿಮೆಂಟರಿ ಬೋರ್ಡ್ ಅಭಿಪ್ರಾಯದ ಮೇರೆಗೆ ಸಿಎಂ ಆಯ್ಕೆ ಅಂತಿಮ ಆಗುತ್ತೆ. ನನ್ನ ಜಿಲ್ಲೆಯ ಶಾಸಕರು ನನ್ನ ಸಿಎಂ ಆಗಬೇಕು ಅಂತ ಇಚ್ಛೆ ಪಡೋದ್ರಲ್ಲಿ ವಿಶೇಷ ಇಲ್ಲ. ಪಕ್ಷ ಏನ್ ನಿರ್ಧಾರ ಮಾಡುತ್ತದೆ ಅನ್ನೋದು ಮುಖ್ಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ಕೇಸ್ – ಕೋದಂಡರಾಮ ಸಿನಿಮಾ ನಟಿಗೂ ಇದ್ಯಾ ಲಿಂಕ್?
ಬಿಜೆಪಿಯ ಮುಂದಿನ ಮುಖ್ಯಮಂತ್ರಿಯೂ ಭ್ರಷ್ಟಚಾರಿಯಾಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿದ್ದವರು. ಬಳಿಕ ಚುನಾವಣೆಯಲ್ಲಿ ಸೋತವರು. ನಮ್ಮ ಪಕ್ಷದ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ಈ ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಹೊಸ ಮುಖ್ಯಮಂತ್ರಿ ಆಗದ ಸಂಧರ್ಭದಲ್ಲಿ, ಜನರಲ್ಲಿ ಇಂತಹ ಮನಸ್ಥಿತಿ ಹುಟ್ಟಿಸುವಂತ ಮಾತಗಳನ್ನ ಮಾಜಿ ಮುಖ್ಯಮಂತ್ರಿ ಆಡುವಂತದ್ದಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.