ಮೂರೂವರೆ ತಿಂಗಳ ಬಳಿಕ ಕೊರೊನಾ ಗೆದ್ದ ವೈದ್ಯ- ಡಾಕ್ಟರ್ ಕಣ್ಣೀರ ಕಥೆ ಓದಿ

Public TV
2 Min Read
DOCTOR 1

ಬೆಂಗಳೂರು: ಸಾಮಾನ್ಯವಾಗಿ ಕೊರೊನಾ ಬಂದರೆ 20 ರಿಂದ 25 ದಿನದಲ್ಲಿ ರೋಗಿಗಳು ಗುಣಮುಖರಾಗುತ್ತಾರೆ. ಆದರೆ ಬೆಂಗಳೂರಿನ ವೈದ್ಯರೊಬ್ಬರು ಕೊರೊನಾ ಗೆದ್ದ ಕಥೆ ಕೇಳಿದರೆ ಕಣ್ಣೀರು ಬರುತ್ತೆ. ಕೊರೊನಾವನ್ನು ಗೆಲ್ಲಲು ಅಥವಾ ಕೊರೊನಾದಿಂದ ಗುಣಮುಖರಾಗಲು ಸತತ ಮೂರೂವರೆ ತಿಂಗಳು ಬೇಕಾಗಿದೆ.

corona virus medium

ಹೌದು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾ ಇದ್ದ ಡಾ. ಸನತ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಇವರು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ನಲ್ಲಿ ಕೆಲಸ ಮಾಡುತ್ತಾ ಇದ್ದರು. ಈ ವೇಳೆ ಡಾ. ಸನತ್ ಅವರಿಗೆ ರೋಗ ಲಕ್ಷಣ ಕಂಡು ಬಂದು ಟೆಸ್ಟ್ ವೇಳೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸಾವಿರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡಿದ ವೈದ್ಯನಿಗೆ ಕೊರೊನಾ ಕಾಡಿದೆ. ಕೋವಿಡ್ ವಾರ್ಡ್ ನಲ್ಲಿ ಕೆಲಸ ಮಾಡ್ತಿದ್ದ ವೈದ್ಯನಿಗೆ ಬೆಂಬಿಡದೇ ಕೊರೊನಾ ಕಾಡಿದ್ದು, ಮಹಾಮಾರಿಯ ಜೊತೆ ಜೀವನ್ಮರಣ ಹೋರಾಟ ಮಾಡಿ ಇದೀಗ ಬದುಕುಳಿದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸುತ್ತೇನೆಂದ ವಿರಾಟ್ ಕೊಹ್ಲಿ

DOCTOR 2

ಡಾ. ಸನತ್ ಅವರಿಗೆ ಕೋವಿಡ್ ಅಟ್ಯಾಕ್ ಆಗಿ ಎರಡೂ ಶ್ವಾಸಕೋಶಗಳಿಗೆ ಹಾನಿಯಾಗಿತ್ತು. ಹೀಗಾಗಿ ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾ ಇದ್ದರು. ಸತತ ಮೂರೂವರೆ ತಿಂಗಳಿಂದ ಚಿಕಿತ್ಸೆ ಪಡೆಯುತ್ತಾ ಇದ್ದ ಕೊರೊನಾ ಯೋಧನಿಗೆ ಅಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರ ತಂಡ ಎರಡು ಶ್ವಾಸಕೋಶಗಳ ಕಸಿ ಮಾಡಿ ಜೀವನ್ಮರಣ ಹೋರಾಟ ಮಾಡುತ್ತಿದ್ದ ಡಾ. ಸನತ್ ರನ್ನು ಬದುಕಿಸಿದ್ದಾರೆ. ಇದನ್ನೂ ಓದಿ: ಪರಿಷತ್‍ನಲ್ಲಿ ನಿದ್ರೆ ಮಾಡೋರಿಗೆ ಹಾಡು ಹೇಳಿ ಎಬ್ಬಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ

corona virus 4 medium

ಅಸ್ಟರ್ ಸಿಎಂಐ ಆಸ್ಪತ್ರೆಯ ಡಾ. ಸಂದೀಪ್ ಅತ್ತಾವರ, ಡಾ.ವಿ ವರುಣ್, ಡಾ. ಶ್ರೀವತ್ಸವ್ ಲೋಕೇಶ್ವರನ್, ಡಾ.ಸುನೀಲ್ ಕುಮಾರ್ ಮತ್ತು ಡಾ.ಪ್ರಕಾಶ್ ವೈದ್ಯರ ತಂಡದಿಂದ ಚಿಕಿತ್ಸೆ ನೀಡಿದ್ದು, ಎರಡು ಶ್ವಾಸಕೋಶಗಳ ಕಸಿ ನಡೆಸಿ ಯಶಸ್ವಿಯಾಗಿದ್ದಾರೆ. ಡಾ. ಸನತ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಸ್ತೇಷಿಯಾ ವಿಶೇಷ ತಜ್ಞರಾಗಿ ಕೆಲಸ ಮಾಡ್ತಾ ಇದ್ದರು. ಎರಡನೇ ಅಲೆ ವೇಳೆ ಕೋವಿಡ್ ಐಸಿಯು ವಾರ್ಡ್ ನಲ್ಲಿ ಕೆಲಸ ಮಾಡ್ತಾ ಇದ್ದರು.  ಇದನ್ನೂ ಓದಿ: ವಿಮಾನದ ಟಿಕೆಟ್‍ಗಿಂತ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ: ರಮೇಶ್ ಕುಮಾರ್

DOCTOR 3

ಸಾವಿರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿ ಮಾಡಿದ್ದ ಡಾ. ಸನತ್ ಅವರಿಗೆ ಕೊರೊನಾ ವಕ್ಕರಿಸಿದೆ. ಕೋವಿಡ್ ಸೋಂಕು ತಗುಲಿದ ಬಳಿಕ ಆರೋಗ್ಯ ಹದಗೆಟ್ಟು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಾ ಇದ್ದರು. ಕ್ರಮೇಣ ಅವರ ಆರೋಗ್ಯ ಹದಗೆಟ್ಟು ಎರಡು ಶ್ವಾಸಕೋಶ ಸಂಪೂರ್ಣ ಹಾನಿಗೊಳಗಾಗಿತ್ತು. ಎರಡು ಶ್ವಾಸಕೋಶಗಳಿಗೆ ಹಾನಿಯಾದ ಹಿನ್ನೆಲೆ ಹೆಬ್ಬಾಳದ ಅಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶೇ.100 ಆಮ್ಲಜನಕದೊಂದಿಗೆ ಐಸಿಯುನಲ್ಲಿ ಜೀವನ್ಮರಣ ಹೋರಾಟ ಮಾಡ್ತಿದ್ದ ಡಾ. ಸನತ್ ಸದ್ಯ ಕೊರೊನಾವನ್ನು ಗೆದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *