– ಚೀನಾದ ಜನಸಂಖ್ಯೆ ಏರಿಕೆ ಪ್ರಮಾಣ ಎಷ್ಟು?
ಬೀಜಿಂಗ್: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ತನ್ನ ಕುಟುಂಬ ಯೋಜನೆಯನ್ನ ಸಡಿಲಗೊಳಿದೆ. ಇನ್ಮುಂದೆ ಮೂರು ಮಕ್ಕಳನ್ನು ಹೊಂದಲು ಚೀನಾ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಮೊದಲು ಜನಸಂಖ್ಯೆ ನಿಯಂತ್ರಣಕ್ಕಾಗಿ ಚೀನಾದಲ್ಲಿ ಎರಡು ಮಕ್ಕಳನ್ನ ಹೊಂದಲು ಮಾತ್ರ ಅವಕಾಶವಿತ್ತು. ದಶಕಗಳ ಬಳಿಕ ತನ್ನ ನಿರ್ಧಾರವನ್ನ ಸಡಿಲಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ.
Advertisement
ಯಾಕೆ ಈ ನಿರ್ಧಾರ?: ಚೀನಾ ಜನಸಂಖ್ಯೆಯಲ್ಲಿ ವೃದ್ಯಾಪ್ಯ ಹಂತಕ್ಕೆ ತೆರಳುತ್ತಿರುವ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಜನನ ಪ್ರಮಾಣ ನಿಧಾನಗತಿಯಲ್ಲಿದೆ. ಜನನ ಪ್ರಮಾಣ ಮಂದಗತಿಯ ಪ್ರಮಾಣಕ್ಕೆ ಎರಡು ಮಕ್ಕಳ ನೀತಿಯೇ ಕಾರಣವಾಗಿತ್ತು. ಭವಿಷ್ಯದ ಚಿಂತನೆಯಲ್ಲಿರುವ ಚೀನಾ ಈ ಮಹತ್ವದ ಹೆಜ್ಜೆಯನ್ನ ಇರಿಸಿದೆ. ಹೊಸ ನೀತಿಗೆ ಚೀನಾ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಸಹ ಅನುಮತಿ ನೀಡಿದ್ದಾರೆ. ದಶಕಗಳಿಂದ ಪಾಲಿಸಿಕೊಂಡ ಬಂದ ನಿಯಮಕ್ಕೆ ಬ್ರೇಕ್ ಬಿದ್ದಿದೆ.
Advertisement
Advertisement
ಜನಸಂಖ್ಯೆ ಏರಿಕೆ ಪ್ರಮಾಣ ಎಷ್ಟು?: 2010 ರಿಂದ 2020ರ ನಡುವೆ ಚೀನಾದ ಜನಸಂಖ್ಯೆ ಬೆಳವಣಿಗೆ ದರ ಶೇ.0.53ರಷ್ಟಿತ್ತು. ಇದಕ್ಕೂ ಮುಂಚೆ 2000 ರಿಂದ 2010ರ ನಡುವೆ ಬೆಳವಣಿಗೆ ಶೇ.0.57ರಷ್ಟಿತ್ತು. ಕಳೆದ ಎರಡು ದಶಕಗಳಿಂದ ಚೀನಾದ ಜನಸಂಖ್ಯೆ ಬೆಳವಣಿಗೆ ದರ ಅತಿ ಕಡಿಮೆ ಹಂತಕ್ಕೆ ತಲುಪಿತ್ತು. 2020ರಲ್ಲಿ ಕೇವಲ 12 ಲಕ್ಷ ಮಕ್ಕಳ ಜನನವಾಗಿದೆ. 2016ರಲ್ಲಿ ಈ ಸಂಖ್ಯೆ 18 ಲಕ್ಷ ಇತ್ತು. 1960ರ ಬಳಿಕ ಚೀನಾದಲ್ಲಿ ಅತಿ ಕಡಿಮೆ ಜನನ ಪ್ರಮಾಣ ದಾಖಲಾಗಿತ್ತು.
Advertisement
ಕಠಿಣ ಕುಟುಂಬ ನೀತಿ: ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾ. ಎರಡನೇ ಸ್ಥಾನದಲ್ಲಿ ಭಾರತವಿದೆ. 1970ರ ದಶಕದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಚೀನಾ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರಲು ಆರಂಭಿಸಿತು. ಆರಂಭದಲ್ಲಿ ದಂಪತಿ ಕೇವಲ ಒಂದು ಮಗು ಪಡೆಯಲು ಮಾತ್ರ ಅನುಮತಿ ನೀಡಲಾಗಿತ್ತು. ಈ ನಿಯಮ ಚೀನಾದಲ್ಲಿ ಪಾಲನೆ ಆಗ್ತಿದ್ದಂತೆ ಜನನ ಪ್ರಮಾಣ ತುಂಬಾನೇ ಇಳಿಕೆಯಾಯ್ತು.
2009ರಲ್ಲಿ ಷರತ್ತು ಬದ್ಧ ಅನುಮತಿ: 2009ರಲ್ಲಿ ಚೀನಾದ ಒನ್ ಚೈಲ್ಡ್ ಪಾಲಿಸಿಯಲ್ಲಿ ಬದಲಾವಣೆ ತರಲಾಯ್ತು. ದಂಪತಿ ಎರಡು ಮಕ್ಕಳು ಹೊಂದಲು ಷರತ್ತು ಬದ್ಧ ಅನುಮತಿ ನೀಡಲಾಯ್ತು. ಯಾರು ತಮ್ಮ ತಂದೆ-ತಾಯಿಗೆ ಒಂದೇ ಸಂತಾನ ಆಗಿರುತ್ತಾರೋ ಅವರು ಮಾತ್ರ ಎರಡು ಮಕ್ಕಳನ್ನು ಪಡೆಯಬಹುದು ಎಂದು ಪಾಲಿಸಿಯಲ್ಲಿ ಸೂಚಿಸಲಾಗಿತ್ತು. 2014ರವರೆಗೂ ಚೀನಾದಲ್ಲಿ ಈ ನೀತಿಯನ್ನ ಪಾಲಿಸಿಕೊಂಡು ಬರಲಾಗಿತ್ತು. ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಇದೀಗ ಮೂರು ಮಕ್ಕಳು ಪಡೆಯಲು ಅನುಮತಿ ನೀಡಲಾಗಿದೆ.