ದಾವಣಗೆರೆ: ಪತ್ನಿ ತುಂಬು ಗರ್ಭಿಣಿ, ಹೆರಿಗೆಗಾಗಿ ಪತ್ನಿಗೆ ವೈದ್ಯರು ಮುಂದಿನ ತಿಂಗಳು 3ಕ್ಕೆ ದಿನಾಂಕ ನೀಡಿದ್ದರು, ಮಗುವಿನ ಆಗಮನಕ್ಕೆ ಇಡೀ ಕುಟುಂಬ ಕಾತರದಿಂದ ಕಾಯುತ್ತಿತ್ತು. ಆದರೆ ಮುದ್ದು ಕಂದಮ್ಮನ ಮುಖ ನೋಡುವ ಮುನ್ನವೇ ಮಹಾಮಾರಿ ಕೊರೊನಾ ಲೈನ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತಂದೆಯನ್ನು ಬಲಿ ಪಡೆದಿದೆ.
Advertisement
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಐನಹಳ್ಳಿ ಗ್ರಾಮದ ನಿವಾಸಿ ಸುರೇಶ್ ನಾಯ್ಕ್, ಜಿಲ್ಲೆಯ ಸಂತೇಬೆನ್ನೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಂದು ಕೊರೊನೆಯುಸಿರೆಳೆದಿದ್ದಾರೆ. ಮೃತ ಸುರೇಶ್ ನಾಯ್ಕ್ ಪತ್ನಿ ರೋಜಾ ತುಂಬು ಗರ್ಭಿಣಿ. ಜೂನ್ 3 ರಂದು ವೈದ್ಯರು ಹೆರಿಗೆ ದಿನಾಂಕ ನೀಡಿದ್ದರು, ಪತಿಯ ಸಾವಿನಿಂದ ತುಂಬು ಗರ್ಭಿಣಿಯ ರೋಧನೆ ನೋಡಿ ಮುಗಿಲು ಮುಟ್ಟಿದ್ದು, ಕುಟುಂಭಸ್ಥರಲ್ಲಿ ಸಹ ದುಃಖ ಮನೆ ಮಾಡಿದೆ. ಇದನ್ನೂ ಓದಿ: ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಮಾಸಿಕ 3,500 ರೂ. ಪರಿಹಾರ – ಸಿಎಂ ಮಹತ್ವದ ಘೋಷಣೆ
Advertisement
Advertisement
ಸಂತೇಬೆನ್ನೂರು ಗ್ರಾಮದಲ್ಲಿ ಬೆಸ್ಕಾಂ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತ ಅದೇ ಗ್ರಾಮದ ರೋಜಾಳನ್ನು ಸುರೇಶ್ ನಾಯ್ಕ್ ಮದುವೆಯಾಗಿದ್ದರು. ಪತ್ನಿ ರೋಜಾ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಯಾಗಲು ವೈದ್ಯರು ದಿನಾಂಕ ಸಹ ಹೇಳಿದ್ದರು. ಆದರೆ ಹೆರಿಗೆ ಆಗಲು ಮೂರ್ನಾಲ್ಕು ದಿನ ಬಾಕಿ ಇರುವಾಗ ಮಗುವಿನ ಮುಖ ನೋಡುವ ಮುನ್ನವೇ ತಂದೆ ಸುರೇಶ್ ನಾಯ್ಕ ಕೊರೊನಾ ಮಹಾಮರಿಗೆ ಬಲಿಯಾಗಿದ್ದಾರೆ. ಈ ಸುದ್ದಿ ಕೇಳಿದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.