– ಮಾರ್ಚ್ 19ಕ್ಕೆ ನೈಜ ಘಟನೆಯಾಧಾರಿತ ಸಿನಿಮಾ ರಿಲೀಸ್
ಗಾಂಧಿನಗರದಲ್ಲಿ ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಸಿನಿಮಾ ಒಂದು ಗಂಟೆಯ ಕಥೆ. ಈಗಾಗ್ಲೇ ಪೋಸ್ಟರ್ ಹಾಗೂ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರ ಇದೇ ಮಾರ್ಚ್ 19ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.
ಶೀರ್ಷಿಕೆ ಕೇಳಿದ್ತಿದ್ದಂತೆ ಇದು ಒಂದು ಗಂಟೆಯ ಅವಧಿ ಸಿನಿಮಾವಲ್ಲ. ಮಾಮೂಲಿ ಪೂರ್ಣಾವಧಿಯ ಚಿತ್ರ. ನೈಜ ಘಟನೆಯಾಧಾರಿತ ಸಿನಿಮಾವಾಗಿರೋದರಿಂದ ಈ ಟೈಟಲ್ ಇಡಲಾಗಿದೆ. ಶೀರ್ಷಿಕೆ ವಿಭಿನ್ನ ಎನಿಸಿದ್ರೂ ಟ್ರೇಲರ್ ಸಖತ್ ಮಜವಾಗಿ ಮೂಡಿ ಬಂದಿದೆ.
Advertisement
Advertisement
ಗುಣ, ಮತ್ತೆ ಮುಂಗಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ರಾಘವ್ ದ್ವಾರ್ಕಿ ಸತತ ಎಂಟು ವರ್ಷಗಳ ಗ್ಯಾಪ್ ನಂತರ ಒಂದು ಗಂಟೆ ಕಥೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರವೂ ಸಂಪೂರ್ಣ ಹಾಸ್ಯಮಯವಾಗಿ ತೆರೆಗೆ ಬರುತ್ತಿದ್ದು, ಪ್ರೇಕ್ಷಕ ಪ್ರಭುಗಳಿಗೆ ಸಂಪೂರ್ಣ ಮನರಂಜನೆ ನೀಡುವ ಭರವಸೆ ನೀಡಿದೆ ಚಿತ್ರತಂಡ.
Advertisement
Advertisement
ಈ ಚಿತ್ರದ ನಿರ್ಮಾಪಕ ಕಶ್ಯಪ್ ದಾಕೋಜು, ಕೆ. ಎಸ್. ದುಶ್ಯಂತ್, ಶ್ವೇತ ದಾಕೋಜು, ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ವತಿಯಿಂದ ತಯಾರಿಸಿರುವ ಮೂರನೇ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಅಜಯ್ ರಾಜ್, ಶನಾಯ ಕಾಟ್ವೆ, ಸ್ವಾತಿ ಶರ್ಮ, ಪಾಪ ಪಾಂಡು ಚಿದಾನಂದ್, ಸಿಲ್ಲಿ ಲಲ್ಲಿ ಆನಂದ್, ಪ್ರಕಾಶ್ ತುಮಿನಾಡು, ಯಶ್ವಂತ್ ಸರ್ದೇಶ್ ಪಾಂಡೆ, ಪ್ರಶಾಂತ್ ಸಿಧ್ಧಿ, ನಾಂಗೇಂದ್ರ ಷಾ, ಮಜಾ ಟಾಕೀಸ್ ರೆಮೋ, ಚಂದ್ರ ಕಲಾ, ಮಿಮಿಕ್ರಿ ಗೋಪಿ, ಕುಳ್ಳ ಸೋಮು, ಹಿರಿಯ ಕಲಾವಿದೆ ಎಮ್ ಎನ್. ಲಕ್ಷ್ಮೀ ದೇವಿ ಎಂದು ಬಹಳಷ್ಟು ಕಲಾವಿದರು ನಟಿಸಿದ್ದಾರೆ. ಇಂಥ ಹಾಸ್ಯಮಯ ಚಿತ್ರಕ್ಕೆ ಸೂರ್ಯಕಾಂತ್ ರವರ ಛಾಯಾಗ್ರಹಣವಿದ್ದು, ಗಣೇಶ್ ಮಲ್ಲಯ್ಯ ರವರ ಸಂಕಲನವಿದೆ. ಡೆನ್ನಿಸ್ ವಲ್ಲಭನ್ ಸಂಗೀತ ಸಿನಿಮಾದಲ್ಲಿದೆ.