ಕಲಬುರಗಿ: ಲಾಕ್‍ಡೌನ್‍ನಿಂದ ಕಲ್ಲಂಗಡಿ ಹಣ್ಣು ಮಾರಾಟವಾಗದ ಹಿನ್ನಲೆ, ಟ್ರ್ಯಾಕ್ಟರ್ ಹೊಡೆದು ತಾನೇ ಬೆಳೆದ ಕಲ್ಲಂಗಡಿ ಹಣ್ಣನ್ನು ರೈತ ಹಾಳು ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದುಗನೂರು ಗ್ರಾಮದಲ್ಲಿ ನಡೆದಿದೆ.
Advertisement
ರಾಮಲಿಂಗಯ್ಯ ಕಲಾಲ್ ಎಂಬ ರೈತ ಮೂರು ಎಕರೆಯಲ್ಲಿ ಎರಡು ಲಕ್ಷ ಹಣ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಹಾಳಾಗಿ ಹೋಗಿದೆ. ಹೀಗಾಗಿ ಕಲ್ಲಂಗಡಿ ಕಿತ್ತು ಬೇರೆ ಬೆಳೆಯಲು ರಾಮಲಿಂಗಯ್ಯ ಮುಂದಾಗಿದ್ದಾರೆ. ಇದನ್ನು ಓದಿ:ಕಠಿಣ ಲಾಕ್‍ಡೌನ್ ಮಧ್ಯೆ ಹೊರ ರಾಜ್ಯಗಳಿಂದ ಕಳ್ಳ ದಾರಿಗಳ ಮೂಲಕ ಎಂಟ್ರಿ- ಕೊರೊನಾ ಹೊತ್ತು ತರುವ ಆತಂಕ
Advertisement
Advertisement
ಕಳೆದ ವರ್ಷ ಸಹ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಕೈ ಸುಟ್ಟುಕೊಂಡಿದ್ದರು. ಈ ಬಾರಿ ಸಹ ಕೊರೊನಾ ಲಾಕ್ ಡೌನ್ ಹಿನ್ನಲೆ ಅದೇ ಪರಿಸ್ಥಿತಿ ಬಂದಿದೆ. ಮಾರುಕಟ್ಟೆಗೆ ಹಣ್ಣು ತೆಗೆದುಕೊಂಡು ಹೋಗಬೇಕು ಅಂದರೂ, ಗೂಡ್ಸ್ ವಾಹನದವರು ಯಾರು ಮುಂದೆ ಬರುತ್ತಿಲ್ಲ. ನಾವಾದರೂ ಹೋಗಿ ಮಾರಾಟ ಮಾಡಬೇಕು ಅಂದರೂ ಖರೀದಿ ಮಾಡುವವರಿಲ್ಲ. ಹೀಗಾಗಿ ಕಲ್ಲಂಗಡಿ ಹಣ್ಣು ಬೆಳೆದು ಕೈ ಸುಟ್ಟಾಗಿದೆ. ಹೀಗಾಗಿ ಸರ್ಕಾರ ಕಲ್ಲಂಗಡಿ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.