– ರಾಜಭವನದಲ್ಲಿ ದೀದಿ ಪ್ರಮಾಣ ವಚನ
ಕೋಲ್ಕತ್ತಾ: ಮೂರನೇ ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ಸರಳವಾಗಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು.
Advertisement
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸತತವಾಗಿ ಮೂರನೇ ಬಾರಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆ ಮಾಡಿದೆ. ರಾಜ್ಯಪಾಲರಾದ ಜಗದೀಪ್ ಧನ್‍ಖಡ್ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರನ್ನ ಹೊರತುಪಡಿಸಿ ಯಾರು ಪ್ರಮಾಣ ವಚನ ಪಡೆಯಲಿಲ್ಲ.
Advertisement
Advertisement
ಈ ಸಮಾರಂಭದಲ್ಲಿ ಟಿಎಂಸಿಯ ಚುನಾವಣೆಯ ರಣತಂತ್ರಗಾರ ಪ್ರಶಾಂತ್ ಕಿಶೋರ್, ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಪ್ರದೀಪ್ ಭಟ್ಟಾಚಾರ್ಯ ಸೇರಿದಂತೆ ಬೆರಳಿಕೆಯಷ್ಟು ಟಿಎಂಸಿ ನಾಯಕರು ಉಪಸ್ಥಿತರಿದ್ದರು.
Advertisement
Mamata Banerjee takes oath as the Chief Minister of #WestBengal for a third consecutive term. She was administered the oath by Governor Jagdeep Dhankhar. pic.twitter.com/IXy05xNZPZ
— ANI (@ANI) May 5, 2021
292 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿಎಂಸಿ 213ರಲ್ಲಿ ಗೆದ್ದಿದೆ. ಬಿಜೆಪಿ 77ರಲ್ಲಿ ಕಮಲ ಬಾವುಟ ಹಾರಿಸಿದೆ. ಚುನಾವಣೆ ಫಲಿತಾಂಶದ ಬಳಿಕ ಪಶ್ವಿಮ ಬಂಗಾಳದಲ್ಲಿ ಹಿಂಸಾಚಾರ ಮರುಕಳಿಸಿದೆ. ಈ ಹಿಂಸಾಚಾರದಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ.