ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 88 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದಾರೆ.
ಇಲ್ಲಿಯವರೆಗಿನ ಸ್ವಾತಂತ್ರ್ಯ ದಿನದ ಭಾಷಣಗಳ ಪೈಕಿ ಇದು ಮೂರನೇ ದೀರ್ಘವಾದ ಭಾಷಣವಾಗಿದೆ. ಬೆಳಗ್ಗೆ 7:30ಕ್ಕೆ ಭಾಷಣ ಆರಂಭಿಸಿದ ಮೋದಿ 9 ಗಂಟೆಯ ಹೊತ್ತಿಗೆ ತಮ್ಮ ಮಾತನ್ನು ಮುಗಿಸಿದರು. ಇದನ್ನೂ ಓದಿ: 54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ
Advertisement
Advertisement
2019ರಲ್ಲಿ ಮೋದಿ 92 ನಿಮಿಷ ಮಾತನಾಡಿದ್ದರು. 2016ರ ಭಾಷಣ ದೀರ್ಘ ಭಾಷಣ ಎಂದು ದಾಖಲಾಗಿದ್ದು ಒಟ್ಟು 96 ನಿಮಿಷ ಮಾತನಾಡಿದ್ದರು. 2017ರ ಭಾಷಣ ಅತಿ ಕಡಿಮೆ ಅವಧಿಯ ಭಾಷಣ ಆಗಿದ್ದು 56 ನಿಮಿಷದಲ್ಲೇ ಮೋದಿ ಮಾತನ್ನು ಕೊನೆಗೊಳಿಸಿದ್ದರು.
Advertisement
Advertisement
ಈ ಹಿಂದೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ದೀರ್ಘ ಭಾಷಣದ ಬಗ್ಗೆ ಪ್ರಸ್ತಾಪಿಸಿ, ಜನರು ಭಾಷಣದ ಅವಧಿಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಜಾರಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದರು.