– ಮಾಸ್ಕ್ ಹಾಕದೆ ಸ್ಕೂಟಿಯಲ್ಲಿ ನಗರ ಸುತ್ತಾಟ
– ಪ್ರಶ್ನಿಸಿದ್ದಕ್ಕೆ ನಾವೂ ಶಿಕ್ಷಣವಂತರು, ನಮಗೂ ಗೊತ್ತು ಎಂದು ಉದ್ಧಟತನ
ಯಾದಗಿರಿ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಜನ ಆಕ್ಸಿಜನ್, ಬೆಡ್ ಕೊರತೆಯಿಂದ ನರೆಳಿ ಸಾಯುತ್ತಿದ್ದಾರೆ. ಇಷ್ಟಾದರೂ ಕೆಲವರು ಮಾತ್ರ ಉದ್ಧಟತನ ಮೆರೆಯುತ್ತಿದ್ದಾರೆ. ಮೂಗೂ ನೋವು ಆಗುತ್ತೆ ಎಂದು ದಂಪತಿ ಮಾಸ್ಕ್ ಹಾಕದೆ, ಸಿಟಿ ರೌಂಡ್ಸ್ ಹೊಡೆಯುತ್ತಿದ್ದು, ಪ್ರಶ್ನಿಸಿದ ಪೊಲೀಸರಿಗೆ ಅವಾಜ್ ಹಾಕಿದ್ದಾರೆ.
Advertisement
ಸುಭಾಷ್ ವೃತ್ತದಲ್ಲಿ ಘಟನೆ ನಡೆದಿದ್ದು, ಮಾಸ್ಕ್ ಹಾಕದೇ ಮೊಪೆಡ್‍ನಲ್ಲಿ ನಗರ ಸುತ್ತುತ್ತಿದ್ದ ದಂಪತಿಯನ್ನು ಪ್ರಶ್ನಿಸಿದ್ದಕ್ಕೆ ಹೈ ಡ್ರಾಮಾ ಮಾಡಿ, ಉದ್ಧಟತನ ಮೆರೆದಿದ್ದಾರೆ. ಮಾಸ್ಕ್ ಹಾಕದ್ದಕ್ಕೆ ಪೊಲೀಸರು ದ್ವಿಚಕ್ರ ವಾಹನ ತಡೆದಿದ್ದು, ಸರ್ ನಾವು ಓದಿದವರಿದ್ದೇವೆ. ರೂಲ್ಸ್ ಬ್ರೇಕ್ ಮಾಡುವುದಿಲ್ಲ, ನಾವು ಆಸ್ಪತ್ರೆಯಿಂದಲೇ ಬಂದಿದ್ದೇವೆ. ಯಾರ್ಯಾರೋ ಎಷ್ಟೆಷ್ಟೋ ಲೂಟಿ ಮಾಡುತ್ತಿದ್ದಾರೆ ಅಂತಹವರನ್ನು ಕೇಳುವುದಿಲ್ಲ, ನಮ್ಮನ್ನು ಕೇಳುತ್ತಿದ್ದೀರಲ್ಲ. ಇದನ್ನೇನು ವೀಡಿಯೋ ಮಾಡುತ್ತೀರಿ, ದೇಶದಲ್ಲಿ ಏನೇನೋ ಮಾಡುತ್ತಿದ್ದಾರಲ್ಲ ಅವರದ್ದು ವೀಡಿಯೋ ಮಾಡಿ, ಇಲ್ಲಿ ಯಾರೂ ಕಳ್ಳರಿಲ್ಲ ಎಂದು ಮಹಿಳೆ ಹೈ ಡ್ರಾಮಾ ಮಾಡಿದ್ದಾರೆ.
Advertisement
Advertisement
ಪೊಲೀಸರು ಮಾತ್ರ ದಂಡ ಕಟ್ಟಿ, ಇಲ್ಲವೇ ದ್ವಿಚಕ್ರ ವಾಹನ ಸೀಜ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಬಳಿಕ ಶಾಸಕರಿಗೆ ಕರೆ ಮಾಡಲು ಯತ್ನಿಸಿದ್ದಾರೆ, ಪೊಲೀಸರು ಫೋನ್‍ನಲ್ಲಿ ಮಾತನಾಡಿಲ್ಲ. ಅಲ್ಲದೆ ಮಹಿಳೆಗೆ ನಿಯಮಗಳನ್ನು ಪಾಲಿಸುವಂತೆ ಹೇಳಿದರೂ ಕೇಳಿಲ್ಲ.
Advertisement
ದಂಪತಿ ಪೊಲೀಸ್ ಕೈಗೆ ಸಿಕ್ಕ ತಕ್ಷಣ ಫುಲ್ ಡ್ರಾಮಾ ಮಾಡಿದ್ದು, ಕೆಲವೊಮ್ಮೆ ಗರ್ಭಿಣಿ, ಮತ್ತೊಂದು ಸಲ ಟೀಚರ್, ಇನ್ನೊಂದು ಸಲ ವಿದ್ಯಾರ್ಥಿನಿ ಎಂದು ಪೊಲೀಸರ ಮುಂದೆ ಫುಲ್ ಹೈಡ್ರಾಮಾ ಮಾಡಿದ್ದಾರೆ. ಅಲ್ಲದೆ ಪತಿ ಶಾಸಕರಿಗೆ ಕರೆ ಮಾಡಿ, ಪೊಲೀಸರಿಗೆ ಮಾತನಾಡಲು ಹೇಳಿದ್ದಾರೆ. ಫೋನ್ ಪಡೆಯದೆ ಪೊಲಿಸರು ಕರೆ ಕಟ್ ಮಾಡಿಸಿದ್ದಾರೆ. ಇಬ್ಬರ ವರ್ತನೆಯಿಂದ ಕೆಂಡಾಮಂಡಲರಾದ ಎಸಿ ಶಂಕರಗೌಡ ಸೋಮನಾಳ, ಸಿಪಿಐ ಸೋಮಶೇಖರ್ ದಂಪತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ದ್ವಿಚಕ್ರ ವಾಹನ ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಲು ಯತ್ನಿಸಿದ್ದಾರೆ.