ಮುಂಬೈ: ಮುಸುಕು ಹಾಕಿಕೊಂಡು ಬಂದು ಅಟ್ಟಾಡಿಸಿಕೊಂಡು ಬಂದು ವ್ಯಕ್ತಿಯೊಬ್ಬನನ್ನು ಚೂರಿಯಿಂದ ಇರಿದ ಘಟನೆ ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಫಯಾಜ್ ಎಂದು ಗುರುತಿಸಲಾಗಿದೆ. ಮುಂಬೈನ ಭೂಲೇಶ್ವರದಲ್ಲಿ ಕೆಲಸ ಮಾಡುತ್ತಿದ್ದ ಫಯಾಜ್ ಕೆಲಸ ಮುಗಿಸಿಕೊಂಡು ಸಂಜೆ 4 ಗಂಟೆಗೆ ಕುರ್ಲಾ ರೈಲು ನಿಲ್ದಾಣದ ಬಳಿಯ ಬ್ರಿಡ್ಜ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿ ಏಕಾಏಕಿ ಫಯಾಜ್ ಮೇಲೆ ದಾಳಿ ಮಾಡಿದ್ದಾನೆ.
ಚೂರಿಯಿಂದ ಇರಿದ ಕೂಡಲೇ ಎಚ್ಚೆತ್ತ ಫಯಾಜ್ ದಾಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸ ನಡೆಸಿದ್ದಾನೆ. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ ದಾಳಿಕೋರ ಮತ್ತೆ ಮತ್ತೆ ಅಟ್ಟಾಡಿಸಿಕೊಂಡು ಬಂದು ಫಯಾಜ್ ಮೇಲೆ ಚೂರಿಯಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಅಕ್ಕಪಕ್ಕ ಓಡಾಡುತ್ತಿದ್ದ ಜನರು ನೋಡುತ್ತ ಸುಮ್ಮನೇ ನಿಂತಿದ್ದರೇ ಹೊರತು ಯಾರು ಸಹಾಯಕ್ಕೆ ಬಂದಿಲ್ಲ.
#WATCH | Man survives knife attack, on a pedestrian bridge in the Kurla area in Mumbai, Maharashtra (28.11.2020)
“There was no attempt by the attacker to appropriate any money. It only seems to be an attack with an intent to cause grievous injury or death,” says a police officer pic.twitter.com/xjhOEjQPuB
— ANI (@ANI) December 2, 2020
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಫಯಾಜ್ ಹೊಟ್ಟೆಗೆ 2 ಬಾರಿ ಚೂರಿಯಿಂದ ಇರಿದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದ ಕೂಡಲೇ ಫಯಾಜ್‍ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿದ್ದ ಫಯಾಜ್ ಚೇತರಿಸಿಕೊಂಡಿದ್ದಾನೆ.
ಆರೋಪಿಗಳ ವಿರುದ್ಧ ಪೊಲೀಸರು ಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. ಮೇಲ್ನೋಟಕ್ಕೆ ಈ ಕೃತ್ಯ ಕಳ್ಳತನ ಅಥವಾ ಲೂಟಿ ಕೃತ್ಯವಲ್ಲ, ಕೊಲೆ ಯತ್ನದಂತೆ ಕಾಣಿಸುತ್ತದೆ ಎಂದು ವರದಿಯಾಗಿದೆ. ದಾಳಿಕೋರನಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.