– ನಿರ್ಮಾಪಕರು ಯಾರನ್ನು ಬೇಕಿದ್ರೂ ಕಣ್ಣೀರು ಹಾಕಿಸ್ತಾರೆ
– ನನ್ನ ತಾಯಿ ಕಾಂಗ್ರೆಸ್ ಅಂತ ಅವರೇ ಹೇಳಿದ್ದರು
ಬೆಂಗಳೂರು: ಒಂದು ವರ್ಷದ ಹಿಂದೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ರಕ್ತ ಕೆಂಪು ಇತ್ತು. ಈಗ ಕೇಸರಿ ಆಗಿದೆ ಎಂದು ಸಂಸದ ಡಿ.ಕೆ ಸುರೇಶ್ ಕಾಲೆಳೆದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನನ್ನ ತಾಯಿ ಅಂತ ಮುನಿರತ್ನ ಅವರೇ ಹೇಳಿದ್ದು. ಅದನ್ನ ನಾನು ಹೇಳಿದ್ದೇನೆ. ಅವರು ಕಟ್ ಪೇಸ್ಟ್ ಮಾಡಿ ಡ್ರಾಮಾ ಮಾಡೋದು ಬೇಡ. ನಾನೇ ಹೇಳಿದ್ದನ್ನ ನಾನೇ ಹೇಳಿದ್ದು. ಕಾಂಗ್ರೆಸ್ ನನ್ನ ತಾಯಿ, ಕಾಂಗ್ರೆಸ್ ನನ್ನ ರಕ್ತ ಅಂದಿದ್ದು ಅವರೇ. ಎಲ್ಲೆಲ್ಲಿ ಯಾವುದನ್ನ ಕಟ್ ಮಾಡಬೇಕು ಯಾವುದನ್ನ ಪೇಸ್ಟ್ ಮಾಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಕಟ್ ಪೇಸ್ಟ್ ಅವರ ವೃತ್ತಿ ಅಲ್ವಾ ಚೆನ್ನಾಗಿ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.
Advertisement
Advertisement
ನಿರ್ಮಾಪಕರಿಗೆ ಕಣ್ಣಿರು ಹಾಕುವುದು, ಹಾಕಿಸುವುದು ಚೆನ್ನಾಗಿ ಗೊತ್ತಿದೆ. ಯಾರ ಬಳಿ ಬೇಕಿದ್ದರೂ ಕಣ್ಣೀರು ಹಾಕಿಸುತ್ತಾರೆ. ಜೋಡಿಸುವುದರಲ್ಲಿ ಕಟ್ ಮಾಡುವುದರಲ್ಲಿ ಅವರಿಗೆ ಹೇಳಿ ಕೊಡಬೇಕಾಗಿಲ್ಲ. ಇವತ್ತು ಡ್ರಾಮ ಶುರು ಮಾಡಿದ್ದಾರೆ. ನನ್ನ ತಾಯಿ, ನನ್ನ ಉಸಿರು, ನನ್ನ ರಕ್ತ ಕಾಂಗ್ರೆಸ್ ಅಂತ ಹೇಳಿದವರು ಮುನಿರತ್ನ. ನೀವು ನಿರ್ಮಾಪಕರು ಯಾರನ್ನ ಬೇಕಾದ್ರು ಕಣ್ಣೀರು ಹಾಕಿಸ್ತೀರಿ, ಯಾರನ್ನ ಬೇಕಾದ್ರು ನಗಿಸ್ತೀರಾ ಎಂದು ವಾಗ್ದಾಳಿ ನಡೆಸಿದರು.
Advertisement
ಮುನಿರತ್ನ ಪಕ್ಷ ಬಿಟ್ಟು ತಾಯಿಗೆ ದ್ರೋಹ ಮಾಡಿದ್ರು ಅಂತ ನಾನು ಸಹ ಅವರ ಬಗ್ಗೆ ಮಾತನಾಡಿದ್ದೇನೆ. ಅವರೇ ಹೇಳಿದ್ದಾರೆ ನನ್ನ ತಾಯಿ ಕಾಂಗ್ರೆಸ್ ಅಂತ. ಅವರ ರಕ್ತ ಒಂದು ವರ್ಷದ ಹಿಂದೆ ಕೆಂಪು, ಈಗ ಕೇಸರಿ ಆಗಿದೆ. ಇದು ಪಕ್ಷದ ವಿಚಾರ ಮಾತನಾಡಿದ್ದೇವೆ. ವೈಯಕ್ತಿಕ ವಿಚಾರಗಳು ಯಾರೂ ಮಾತನಾಡಿಲ್ಲ. ನಾವು ಜವಾಬ್ದಾರಿ ಸ್ಥಾನದಲ್ಲಿ ಇದ್ದೇವೆ ಎಂದರು. ಇದನ್ನೂ ಓದಿ: ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ
Advertisement
ಆರ್ ಆರ್ ನಗರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಫೈಟ್ ಇದೆ ಅಂತ ಆಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ನಾನು ಮಾತನಾಡಲ್ಲ ಮೂರರಂದು ಗೊತ್ತಾಗುತ್ತೆ. ಆಶೋಕ್ ಹಾಗು ಒಕ್ಕಲಿಗ ಸಚಿವರಿಗೆ ಒಳ್ಳೆಯದಾಗ್ಲಿ. ಮೂರನೇ ತಾರೀಕಿನ ಬಳಿಕ ಯಾರು ಮೊದಲು ಯಾರು ಬಳಿಕ ಅನ್ನೋದು ಗೊತ್ತಾಗುತ್ತೆ. ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರ ಈಗ ಬೇಡ. ಮೂರನೇ ತಾರೀಕು ಬಳಿಕ ಮಾತನಾಡುತ್ತೇನೆ. ಈಗ ಬರೀ ಮುನಿರತ್ನ-ಕುಸುಮಾ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ಹೇಳಿದರು.