– ಕಿಟಕಿಯ ಮೂಲಕ ಆರೋಪಿ ಎಂಟ್ರಿ
– ಅರೆಬೆತ್ತಲೆ ಬಂದು ಜೈಲುಪಾಲಾದ
ಮುಂಬೈ: ಮನಷ್ಯನ ಅತ್ಯುತ್ತಮ ಸ್ನೇಹಿತ ಎಂದು ಹೇಳುತ್ತಾರೆ. ಈ ಗಾದೆ ಮಾತು ಮಹಿಳೆಯರಿಗೂ ಅನ್ವಯಿಸುತ್ತದೆ.
ಹೌದು. ವ್ಯಕ್ತಿಯೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ 33 ವರ್ಷದ ಮಹಿಳೆಯೊಬ್ಬರು ತಾನು ಸಾಕಿದ್ದ ಮುದ್ದಿನ ಶ್ವಾನದಿಂದಾಗಿ ಪಾರಾಗಿದ್ದಾರೆ. ಆರೋಪಿಯನ್ನು ಸದರ್ ಆಲಂ(25) ಎಂದು ಗುರುತಿಸಲಾಗಿದೆ. ಈ ಘಟನೆ ಮುಂಬೈನ ಪೊವಾಯ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
Advertisement
Advertisement
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಸಲುವಾಗಿ ಆರೋಪಿ ಸದರ್ ಅರೆಬೆತ್ತಲಾಗಿ ಕಿಟಕಿಯ ಮೂಲಕ ಮನೆಗೆ ಪ್ರವೇಶಿಸಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಸಾಕಿದ್ದ ಶ್ವಾನ ಜೋರಾಗಿ ಬೊಗಳಲು ಆರಂಭಿಸಿದೆ. ಈ ಮೂಲಕ ವ್ಯಕ್ತಿಯೊಬ್ಬ ಮನೆಗೆ ಎಂಟ್ರಿ ಕೊಟ್ಟದ್ದನ್ನು ಶ್ವಾನ ಮಹಿಳೆಗೆ ಎಚ್ಚರಿಸಿದೆ.
Advertisement
Advertisement
ಇತ್ತೀಚೆಗಷ್ಟೇ ಮಹಿಳೆ ಪತಿಯನ್ನು ಕಳೆದುಕೊಂಡಿದ್ದು, ತನ್ನ 7 ವರ್ಷದ ಮಗಳ ಜೊತೆ ಪೊವಾಯ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಳು. ಇದನ್ನೇ ಉಪಯೋಗಿಸಿಕೊಂಡ ವ್ಯಕ್ತಿ ಮಹಿಳೆಯ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸಿದ್ದಾನೆ. ಆದರೆ ಮಹಿಳೆ ಈತನನ್ನು ತಿರಸ್ಕರಿಸಿದ್ದಳು. ಈ ಹಿನ್ನೆಲೆಯ್ಲಲಿ ಆರೊಪಿ ಮಹಿಳೆಯ ಮನೆಗೆ ನುಗಿದ್ದಾನೆ. ಅಲ್ಲದೆ ಮಹಿಳೆ ಈತನನ್ನು ತಿರಸ್ಕರಿಸಿದ್ದಕ್ಕಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದನು.
ಆದರೆ ಮಹಿಳೆಯ ಮನೆಗೆ ಆರೋಪಿ ನುಸುಳುತ್ತಿದ್ದಂತೆಯೇ ಆಕೆಯ ಸಾಕು ನಾಯಿ ಎಚ್ಚರಿಸಿ ಪಾರು ಮಾಡಿದೆ. ನಾಯಿ ಬೊಗಳುತ್ತಿದ್ದಂತೆಯೇ ಮಹಿಳೆ ಕೂಡ ವ್ಯಕ್ತಿಯನ್ನು ಗಮನಿಸಿದ್ದು, ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಇದನ್ನು ಅರಿತ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ. ಸದ್ಯ ಆಲಂ ಜೈಲು ಕಂಬಿ ಎಣಿಸುತ್ತಿದ್ದಾನೆ.