ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಮುದ್ದಿನ ಶ್ವಾನ ಬ್ರೊನೋ ಅಗಲಿರುವುದಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇನ್‍ಸ್ಟಾಗ್ರಾಮ್‍ನಲ್ಲಿ ಕೆಲವು ಸಾಲುಗಳನ್ನು ಬರೆದುಕೊಂಡು ಪೋಸ್ಟ್ ಮಾಡಿಕೊಂಡು ಭಾವುಕರಾಗಿದ್ದಾರೆ.
ಮೇಘನಾ ರಾಜ್ ಅವರ ಮನೆಯ ಸದಸ್ಯನಂತಿದ್ದ ಮುದ್ದಿನ ನಾಯಿ ಬ್ರೂನೋ ಇನ್ನಿಲ್ಲ. ಮನೆಯಲ್ಲಿ ಬೆಸ್ಟ್ ಫ್ರೆಂಡ್‍ನಂತಿದ್ದ ಬ್ರೂನೋ ನಿನ್ನೆ ಕೊನೆಯುಸಿರೆಳೆದಿದೆ. ಅಗಲಿದ ಸ್ನೇಹಿತನಿಗಾಗಿ ಭಾವುಕರಾಗಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬ್ರೂನೋ ಜೊತೆಗಿನ ಫೋಟೋಗಳ ಜೊತೆಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ.
View this post on Instagram
ಬ್ರೂನೋ ಬಗ್ಗೆ ಪರಿಚಯಿಸುವ ಅಗತ್ಯ ಇಲ್ಲ.ಜೂನಿಯರ್ ಚಿರು ನಿನ್ನೊಂದಿಗೆ ಆಟವಾಡಲಿ, ನಿನ್ನ ಮೇಲೆ ಸವಾರಿ ಮಾಡಲಿ ಎಂದು ತುಂಬಾ ಬಯಸಿದ್ದೆ. ಬ್ರೂನೋಗೆ ಮಕ್ಕಳೆಂದರೆ ಇಷ್ಟವಿಲ್ಲ, ಆದರೆ, ಬ್ರೂನೋ ಜೂನಿಯರ್ ಜತೆ ಮಾತ್ರ ಹೊಂದಿಕೊಂಡಿದ್ದ, ತನ್ನ ಯಜಮಾನನ ಬಗ್ಗೆ ತಿಳಿಸುಕೊಂಡಿದ್ದ. ಬ್ರೂನೋ ಇಲ್ಲದ ಮೆನ ಮೊದಲಿನಂತೆ ಇರುವುದಿಲ್ಲ. ಮನೆಗೆ ಬಂದವರು ಎಲ್ಲರೂ ನಿನ್ನ್ನು ಕೇಳುತ್ತಾರೆ. ನಿನ್ನನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನೀನು ಚಿರು ಜೊತೆ ಇರ್ತೀಯಾ. ಯಾವಾಗಲೂ ಅವರಿಗೆ ತೊಂದರೆ ಕೊಡುತ್ತಿದ್ದಂತೆಯೇ ಇರುತ್ತೀಯಾ ಎಂದು ಮೇಘನಾ ಭಾವುಕರಾಗಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದರು. ಇಧಿಗ ಅವರ ಮುದ್ದಿನ ಸಾಕು ನಾಯಿಯನ್ನು ಕಳೆದುಕೊಂಡಿದ್ದಾರೆ. ಚಿರು ಇಲ್ಲದ ನೋವು ಇನ್ನೂ ಮನಸ್ಸಿನಿಂದ ಮಾಸಿಲ್ಲ. ಆದರೆ ಜೂನಿಯರ್ ಚಿರು ಹುಟ್ಟಿದಾಗಿನಿಂದ ಎಲ್ಲರ ಮೊಗದಲ್ಲಿ ಕೊಂಚ ನಗು ಮೂಡಿದೆ.