– ಹೈದರಾಬಾದ್ ಕೋಟೆಯಲ್ಲಿ ಅರಳಿದ ಕಮಲ
– ಟಿಆರ್‌ಎಸ್ 55, ಎಐಎಂಎಂಗೆ 44 ಸ್ಥಾನ
ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಈಗಲೇ ತನ್ನ ಅಡಿಪಾಯವನ್ನು ಗಟ್ಟಿ ಮಾಡಿದೆ.
150 ವಾರ್ಡ್‍ಗಳ ಪೈಕಿ 49ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಸಿಎಂ ಚಂದ್ರಶೇಖರ್ ರಾವ್ ಅವರ ಟಿಆರ್‌ಎಸ್ 55, ಅಸಾದುದ್ದೀನ್ ಒವೈಸಿಯ ಎಐಎಂಎಂ 44 ವಾರ್ಡ್‌ಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್ 2 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯೊಂದಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಳಿಕ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಮಾಡಿದ ಮೊದಲ ದೊಡ್ಡ ಪ್ರಯತ್ನ ಫಲ ನೀಡಿದೆ. ಅಷ್ಟೇ ಅಲ್ಲದೇ ಚಂದ್ರಶೇಖರ್ ರಾವ್ ಮತ್ತು ಓವೈಸಿ ಕಪಿಮುಷ್ಠಿಯಲ್ಲಿದ್ದ ಮುತ್ತಿನಗರಿಗೆ ಬಿಜೆಪಿ ಮುತ್ತಿಗೆ ಹಾಕಿದಂತಾಗಿದೆ.
Advertisement
The people of Hyderabad have made it clear what will be the results of the Telangana assembly elections (2023). I can say with confidence that people of Telangana have decided to say goodbye to the corrupt KCR government: BJP President JP Nadda https://t.co/eznwwhbN8E
— ANI (@ANI) December 4, 2020
Advertisement
ವಿಶೇಷ ಏನೆಂದರೆ 2016ರ ಚುನಾವಣೆಯಲ್ಲಿ ಟಿಆರ್‌ಎಸ್ 99, ಎಐಎಂಎಂ 44, ಕಾಂಗ್ರೆಸ್ 3 ವಾರ್ಡ್‌ಗಳನ್ನು ಗೆದ್ದುಕೊಂಡಿದ್ದರೆ ಬಿಜೆಪಿ ಕೇವಲ 4 ವಾರ್ಡ್‌ಗಳನ್ನು ಮಾತ್ರ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು. ಪರಿಣಾಮ ಗೃಹ ಸಚಿವ ಅಮಿತ್ ಶಾ ಆದಿಯಾಗಿ ಕೇಂದ್ರದ ಬಿಜೆಪಿ ನಾಯಕರು ವ್ಯಾಪಕ ಪ್ರಚಾರ ಕೈಗೊಂಡಿದ್ದರು.
Advertisement
ಹೈದರಾಬಾದ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವಷ್ಟು ವಾರ್ಡ್ ಗೆಲ್ಲದಿದ್ದರೂ ಪಕ್ಷ ಸಂಘಟನೆ ಬಲವಾಗಿದೆ.
Advertisement
I'd like to thank people of Hyderabad for having chosen BJP based on good governance model. It's a moral loss for TRS. As far as question of the mayor is concerned, we're committed to work for the welfare for the state & the people: Bhupender Yadav, BJP leader, on GHMC elections pic.twitter.com/PAhCiTfSLB
— ANI (@ANI) December 4, 2020
ಬಿಜೆಪಿ ಗೆದ್ದಿದ್ದು ಹೇಗೆ?
* ತೆಲಂಗಾಣದಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ
* ಬಿಜೆಪಿ ಅಗ್ರನಾಯಕರಾದ ಅಮಿತ್‍ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್, ತೇಜಸ್ವಿ ಸೂರ್ಯ, ಸಿಟಿ ರವಿ, ಸುಧಾಕರ್, ಸತೀಶ್‍ರೆಡ್ಡಿ ಪ್ರಚಾರ
* ಹೈದರಬಾದನ್ನು `ಮಿನಿ ಇಂಡಿಯಾ-ಐಟಿ ಹಬ್’ ಮಾಡ್ತೇವೆ ಎಂದಿದ್ದ ಅಮಿತ್ ಶಾ
* ಹೈದರಾಬಾದ್ ಹೆಸರನ್ನು `ಭಾಗ್ಯ ನಗರ’ ಮಾಡುತ್ತೇವೆ ಎಂದು ಘೋಷಣೆ
* ನಿಜಾಮರ ಸಂಸ್ಕೃತಿ ಬದಲಿಸ್ತೇವೆ ಎಂದಿದ್ದ ಯೋಗಿ ಆದಿತ್ಯನಾಥ್
* ಕೊರೊನಾ ಲಸಿಕೆ ಉಚಿತ ಮತ್ತು ಟೆಸ್ಟಿಂಗ್
* ಮುಸಿ ನದಿ ನವೀಕರಣ, ಉಚಿತ ನೀರು, 100 ಯುನಿಟ್ ಒಳಗೆ ಬಳಸಿದರೆ ಉಚಿತ ವಿದ್ಯುತ್
* ಮೆಟ್ರೋ, ಸಿಟಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ