ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯ ವರ್ಷದ ಕಾರ್ಣಿಕೋತ್ಸವ ನಡೆಯಿತು. ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್ ಎಂದು ಗೊರವಯ್ಯ ಸ್ವಾಮಿ ಡೆಂಕನಮರಡಿಯಲ್ಲಿ ಬಿಲ್ಲನ್ನೇರಿ ಕಾರ್ಣಿಕವಾಣಿ ನುಡಿದಿದ್ದಾರೆ.
Advertisement
ಐತಿಹಾಸಿಕ ಸುಕ್ಷೇತ್ರ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ ನಡೆದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ 15 ಅಡಿ ಎತ್ತರದ ಬಿಲ್ಲನೇರಿದ ಗೊರವಯ್ಯ ಸ್ವಾಮಿ ಬಿಲ್ಲನೇರಿ ಸದ್ದಲೇ ಎನ್ನುತ್ತಾ ಈ ವರ್ಷದ ಭವಿಷ್ಯವಾಣಿ “ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್” ಎಂದು ದೈವವಾಣಿ ನುಡಿದಿದ್ದಾರೆ.
Advertisement
ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರಣಿಕವನ್ನು ವಿಶ್ಲೇಷಿಸಿದ್ದು, ಮೂರು ಭಾಗದಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ, ಒಂದು ಭಾಗದಲ್ಲಿ ಸ್ವಲ್ಪ ಸಮಸ್ಯೆ ಆಗಲಿದೆ. ರಾಜಕೀಯವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ಛಿದ್ರ ಛಿದ್ರ ಆಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವ ಮುನ್ಸೂಚನೆ ಇದೆ ಎಂದು ಕಾರ್ಣಿಕವಾಣಿಯನ್ನು ವಿಶ್ಲೇಷಣೆ ಮಾಡಿದರು.
Advertisement
Advertisement
ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ರಾಜ್ಯದಲ್ಲಿ ರಾಜಕೀಯವಾಗಿ ಮೂರು ಭಾಗ ಆಗುವ ಸಾದ್ಯತೆ ಇದೆ. ಯಡಿಯೂರಪ್ಪ ಒಂದು ಭಾಗ, ಯತ್ನಾಳ್ ಇನ್ನೊಂದು ಭಾಗ ಮತ್ತು ಬಿಜೆಪಿಗೆ ಹೋದವರು ಒಂದು ಭಾಗವಾಗಿ ಛಿದ್ರ ಛಿದ್ರವಾಗಲಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.
ಕೊರೊನಾ ನಿರ್ಬಂಧದ ನಡುವೆ ಈ ಬಾರಿಯ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಸ್ವಲ್ಪ ಇಳಿಮುಖವಾಗಿತ್ತು. ಗೊರವಯ್ಯಸ್ವಾಮಿ ವರ್ಷ ಭವಿಷ್ಯವಾಣಿ ಕೇಳಿದ ನಂತರು ಭಕ್ತರು ತಮ್ಮ ತಮ್ಮ ಊರಿಗೆ ಹೆಜ್ಜೆ ಹಾಕಿದರು.