ಟೊಮೆಟೊವನ್ನು ಹೆಚ್ಚಾಗಿ ನಾವು ಪದಾರ್ಥಗಳನ್ನು ತಯಾರಿಸುವಾಗ ಬಳಕೆ ಮಾಡುತ್ತೇವೆ. ಆದರೆ ಇದೇ ತರಕಾರಿಯಿಂದ ನಾವು ಅಡುಗೆಯ ರುಚಿಯನ್ನು ಹೆಚ್ಚಿಸುತ್ತೇವೆ. ಹಾಗೇ ನಮ್ಮ ಮುಖದ ತ್ವಚೆಯ ರಕ್ಷಣೆಯನ್ನೂ ಮಾಡಿಕೊಳ್ಳ ಬಹುದಾಗಿದೆ.
ಅಂಗಡಿಯಲ್ಲಿ ಸಿಗುವ ಕ್ರೀಮ್‍ಗಳ ಬಳಕೆ ಮಾಡುವ ಬದಲಾಗಿ ಮನೆಯ ಅಡುಗೆ ಮನೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುವ ಟೋಮೆಟೊವನ್ನು ಉಪಯೋಗಿಸಿ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ.
Advertisement
Advertisement
* ಟೊಮೆಟೊವನ್ನು ಮುಖದ ಮೇಲೆ ಚೆನ್ನಾಗಿ ಉಜ್ಜಿಕೊಂಡು 10-15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ನೀವು ಎಣ್ಣೆಯುಕ್ತ ಅಥವಾ ಮೊಡವೆ ಪೀಡಿತ ತ್ವಚೆಯನ್ನು ಹೊಂದಿದ್ದರೆ, ಟೊಮೆಟೊ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮುಖದ ಹೆಚ್ಚುವರಿ ತೈಲವನ್ನು ಹೀರಿಕೊಂಡು, ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Advertisement
* ಮೊಡವೆಗಳು ಸಾಮಾನ್ಯವಾಗಿ ಚರ್ಮದಲ್ಲಿ ಸಿಕ್ಕಿಹಾಕಿಕೊಂಡಿರುವ ಕೊಳಕು, ತೈಲಗಳಿಂದ ಅಥವಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಟೊಮೆಟೊದಲ್ಲಿ ವಿಟಮಿನ್ ಎ,ಸಿ ಮತ್ತು ಕೆ ಜೊತೆಗೆ ಅದರಲ್ಲಿರುವ ಆಮ್ಲಿಯ ಗುಣಗಳು ಚರ್ಮದ ಕಾಂತಿಯನ್ನು ಕಾಪಾಡುತ್ತವೆ.
Advertisement
* ಒಂದು ಟೊಮೆಟೊವನ್ನು ಪೇಸ್ಟ್ ಮಾಡಿ, ಅದಕ್ಕೆ ಅದನ್ನು ಮುಲ್ತಾನಿ ಮಿಟ್ಟಿ ಮತ್ತು ಒಂದು ಟೀಸ್ಪೂನ್ ತಾಜಾ ಪುದೀನ ಪೇಸ್ಟ್ ಬೆರೆಸಿ ಫೇಸ್ ಪ್ಯಾಕ್ ಮಾಡಿ ಮನೆಯೊಳಗೆ ಅಥವಾ ಹೊರಗಿರಲಿ ಸನ್ ಸ್ಕ್ರೀನ್ ಬಳಕೆ ಅತ್ಯಂತ ಮುಖ್ಯ. ಅದು ಇಲ್ಲದಿದ್ದಲ್ಲಿ ಅದರ ಬದಲಿಗೆ ಟೊಮ್ಯಾಟೋವನ್ನು ಬಳಸಬಹುದಾಗಿದೆ.
* ಟೊಮೆಟೊ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ, ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ. ಹೊಳೆಯುವ ತ್ವಚೆಗಾಗಿ 15 ನಿಮಿಷಗಳ ನಂತರ ತೊಳೆಯಿರಿ.ಸುಕ್ಕುಗಳು, ಕಲೆಗಳು, ನಿಮ್ಮ ತ್ವಚೆಯನ್ನು ನಿರ್ಜೀವ ಮತ್ತು ಮಂದವಾಗಿ ಕಾಣುವಂತೆ ಮಾಡುತ್ತದೆ.
* ಟೊಮೆಟೊ ಫೇಸ್ ಪ್ಯಾಕ್ ನಲ್ಲಿ ಪೋಷಕಾಂಶಗಳು ಅಧಿಕವಾಗಿದ್ದು, ಇದರಲ್ಲಿ ಫೆಮಾಲಿಕ್ ಅಂಶಗಳು ಹೆಚ್ಚಾಗಿರುತ್ತವೆ. ಕ್ಯಾರೋಟನಾಯ್ಡ್, ಫಾಲಿಕ್ ಆಮ್ಲ, ಮತ್ತು ವಿಟಮಿನ್ ಸಿ ಇದೆ. ಚರ್ಮಕ್ಕೆ ಲಾಭ ನೀಡಲಿದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಆಂಟಿಟ್ರೋಸಿನೇಸ್ ಗುಣಗಳು ಕಲೆಗಳ ಬಣ್ಣ ಮಾಸುವಂತೆ ಮಾಡುವುದು. ಮತ್ತು ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ.