ಮುಂಬೈ: ಲೋಕಸಭಾ ಸದಸ್ಯ ಮೋಹನ್ ದೆಲ್ಕರ್(58) ಮುಂಬೈನ ಪ್ರಸಿದ್ಧ ತಾರಾ ಹೋಟೆಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದಾದ್ರಾ ಮತ್ತು ನಗರ ಹವೇಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೆಲ್ಕರ್ ಜಯಗಳಿಸಿದ್ದರು. ಮರೀನ್ ಡ್ರೈವ್‌ನಲ್ಲಿರುವ ಸೀ ಗ್ರೀನ್ ಹೋಟೆಲಿನಲ್ಲಿ ದೆಲ್ಕರ್ ದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ರವಾನಿಸಲಾಗಿದೆ.
ಪೊಲೀಸರು ಗುಜರಾತಿ ಭಾಷೆಯಲ್ಲಿ ಬರೆದಿರುವ ಡೆತ್ ನೋಟ್ ಅನ್ನು ಹೋಟೆಲಿನಿಂದ ವಶಕ್ಕೆ ಪಡೆದಿದ್ದಾರೆ.
ದೆಲ್ಕರ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ದಾದ್ರಾ ಮತ್ತು ನಗರ ಹವೇಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು 2019ರಲ್ಲಿ ಪಕ್ಷವನ್ನು ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು.